ಮಂಗಳೂರು: ಕಲೆ, ಸಾಹಿತ್ಯದ ಜೊತೆ ಸಾಂಸ್ಕೃತಿಕ ಸಂಘಟನೆಯಲ್ಲಿಯೂ ಪ್ರಸಿದ್ಧಿ ಪಡೆದಿರುವ ಮೂಡಬಿದರೆಯ ಪುತ್ತಿಗೆ ಬಳಿಯ ಸಂಪಿಗೆಯ ಡಾ ಪಿ ಯೋಗಿ ಸುಧಾಕರ ತಂತ್ರಿಗಳು ಇದೀಗ ಇನ್ನೊಂದು ಸಾಹಸ ಮಾಡಿದ್ದಾರೆ.
ಪೌರಹಿತ್ಯ, ಜ್ಯೋತಿಷ್ಯದಲ್ಲಿಯೂ ಪ್ರಸಿದ್ಧಿ ಹೊಂದಿರುವ ಅವರು ಇದೀಗ `ಪಂಚಮುಖೀ ರುದ್ರಾಕ್ಷಿ ಮಹಿಮೆ’ ಎಂಬ ಯಕ್ಷಗಾನ ತಾಳಮದ್ದಲೆ ರಚಿಸಿ, ಆ ಬಗ್ಗೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಜೂ 16ರಂದು ಸಂಪಿಗೆಯ ಶ್ರೀದುರ್ಗಾ ಜ್ಯೋತಿಷ್ಯಾಲಯದಲ್ಲಿ ಈ ತಾಳಮದ್ದಲೆಯ ಪ್ರಥಮ ಪ್ರಯೋಗ ನಡೆಯಿತು. ಇದು ನೆರೆದಿದ್ದ ಕೇಳುಗರನ್ನು ರಂಜಿಸಿತು.
ಡಾ ಪಿ ಯೋಗಿ ಸುಧಾಕರ ತಂತ್ರಿಗಳು 70ಕ್ಕೂ ಅಧಿಕ ಸುಪ್ರಭಾತಗಳನ್ನು ಸಹ ರಚಿಸಿದ್ದಾರೆ. ಯಕ್ಷಗಾನವೂ ಅವರ ಆಸಕ್ತಿಯ ಕ್ಷೇತ್ರ. ಸಮನ್ವಯ ಕ್ಲಬ್ ಸದಸ್ಯರಾಗಿರುವ ಅವರು ಈ ಕ್ಲಬ್ 600ನೇ ದಿನ ಪೂರೈಸಿದ ಹಿನ್ನಲೆ ತಾಳಮದ್ದಲೆ ಕಾರ್ಯಕ್ರಮ ಸಂಘಟಿಸಿದ್ದರು.
Discussion about this post