ಯಲ್ಲಾಪುರ: ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ವಿಶ್ವ ಯೋಗ ದಿನ ನಡೆದಿದ್ದು, ನೂರಾರು ಮಕ್ಕಳು ಸಾಮೂಹಿಕ ಯೋಗಭ್ಯಾಸ ಮಾಡಿದರು.
ಮುಖ್ಯ ವಕ್ತಾರರಾಗಿ ಆಗಮಿಸಿದ ಜಿ ಎಸ್ ಗಾಂವ್ಕರ್ ಮಾತನಾಡಿ `ಒತ್ತಡದ ನಡುವೆ ಮನಸ್ಸಿನ ವಿರಾಮಕ್ಕೆ ಯೋಗ ಸಹಕಾರಿ. ಆರೋಗ್ಯದ ಗುಟ್ಟು ಯೋಗದಲ್ಲಿದ್ದು, ಯೋಗದ ಆಚರಣೆ ನಮ್ಮ ಬದುಕಿನ ಭಾಗವಾಗಬೇಕು’ ಎಂದರು. ಅಧ್ಯಕ್ಷತೆಯನ್ನು ಶಿಕ್ಷಕ ಎಸ್ ಟಿ ಬೇವಿನಕಟ್ಟಿವಹಿಸಿದ್ದರು. ಶಿಕ್ಷಕ ಚಿದಾನಂದ ಹಳ್ಳಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿನೋದ ಗಾಯನ್ನವರ ಯೋಗ ತರಬೇತಿ ನಡೆಸಿಕೊಟ್ಟರು. ಶಿಕ್ಷಕ ಗಿರೀಶ ಹೆಬ್ಬಾರ ವಂದಿಸಿದರು.
ವರದಿ: ದತ್ತಾತ್ರೇಯ ಕಣ್ಣಿಪಾಲ, ವರದಿಗಾರರು ವಿಶ್ವವಾಣಿ
Discussion about this post