ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟಿನಲ್ಲಿ ಜಾಮೀನು ದೊರೆತಿರುವುದಕ್ಕೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ. `ಸತೀಶ್ ಸೈಲ್ ಅವರಿಗೆ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಅಮಾನತುಗೊಳಿಸಿದ್ದು, ನ್ಯಾಯಕ್ಕೆ ಸಿಕ್ಕ ಜಯ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಬೇಲೆಕೇರಿ ಬಂದರು ಅದಿರು ನಾಪತ್ತೆ ಪ್ರಕರಣಕ್ಕೆ ಸಂಬoಧಿಸಿದoತೆ ಈ ಹಿಂದೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಶಿಕ್ಷೆ ಪ್ರಕಟಣೆಗೂ ಪೂರ್ವ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಲು ಆದೇಶಿಸಿತ್ತು. ಈ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದಾಗ ಕೆಳ ನ್ಯಾಯಾಲಯದ ಆದೇಶ ಅಸ್ಪಷ್ಟವಾಗಿದೆ ಎಂದು ಅಭಿಪ್ರಾಯಿಸಿ, ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದೆ.
`ಸೈಲ್ ಅವರು ಜೈಲಿಗೆ ಹೋದಾಗ ಕೆಲವರು ಸಂಭ್ರಮಿಸಿದ್ದರು. ಗುರುಮಠದ ಶಾಪದಿಂದ ಸತೀಶ್ ಸೈಲ್ ಜೈಲು ಸೇರಿದ್ದಾಗಿ ಸುಳ್ಳು ಸುದ್ದಿ ಹರಡಿದ್ದರು. ಕೆಲ ರಾಜಕಾರಣಿಗಳು ಮೈಮೇಲೆ ಪ್ರಜ್ಞೆ ಕಳೆದುಕೊಂಡವರoತೆ ಕುಣಿದು ಕುಪ್ಪಳಿಸಿದ್ದರು. ಈ ನಡುವೆ ಅನೇಕರು ಸತೀಶ್ ಸೈಲ್ ಬಿಡುಗಡೆಗೆ ಪ್ರಾರ್ಥಿಸಿದ್ದು, ಅವರೆಲ್ಲರ ಪ್ರಾರ್ಥನೆಗೆ ಫಲ ಸಿಕ್ಕಿದೆ’ ಎಂದವರು ಹೇಳಿದ್ದಾರೆ.
`ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು. ಆದರೆ, ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ ಅದನ್ನು ಕಂಡು ಸಂಭ್ರಮಿಸುವವರಿಗೆ ದೇವರು ಬುದ್ದಿ ಕೊಡಬೇಕು’ ಎಂದು ಮಾಧವ ನಾಯಕ ಹೇಳಿದ್ದಾರೆ.