ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪುಣ್ಯ ಕ್ಷೇತ್ರದ ಜೊತೆ ಪ್ರವಾಸಿತಾಣವೂ ಹೌದು. ಈ ಮುರುಡೇಶ್ವರದ ಸೊಬಗನ್ನು ಖ್ಯಾತ ವೈದ್ಯ ಹರಿಪ್ರಸಾದ ಕೇಣಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅತ್ಯದ್ಬುತವಾಗಿ ಕ್ಲಿಕ್ಕಿಸಿದ್ದಾರೆ. ಹರಿಪ್ರಸಾದ ಕೇಣಿ ಅವರು ಮುರುಡೇಶ್ವರದ ಅಂಚೆ ಕಚೇರಿ ಬಳಿ `ತಾಜ್ ಕ್ಲಿನಿಕ್’ ನಡೆಸುತ್ತಾರೆ. ನಿಸರ್ಗದ ಫೋಟೋ ಕ್ಲಿಕ್ಕಿಸುವುದು ಅವರ ಪ್ರಮುಖ ಹವ್ಯಾಸ. ಸಮುದ್ರದ ಎಡಭಾಗದಿಂದ ಅವರು ಈ ಫೋಟೋ ಕ್ಲಿಕ್ಕಿಸಿದ್ದು, ಆ ಫೋಟೋಗೆ ಪ್ರೇಮ್ ಮಾಡಿಸಿ ತಮ್ಮ ಕ್ಲಿನಿಕ್ ಗೋಡೆಗೆ ತೂಗು ಹಾಕಿದ್ದಾರೆ. `ಬಗೆ ಬಗೆಯ ಕ್ಯಾಮರಾ ಉಪಯೋಗಿಸಿದರೂ ಈ ಬಗೆಯ ಫೋಟೋ ಬಂದಿರಲಿಲ್ಲ. ಮೊಬೈಲ್ ಕ್ಯಾಮರಾದಲ್ಲಿ ಮುರುಡೇಶ್ವರ ಚಿತ್ರ ಸೆರೆ ಹಿಡಿದಿದ್ದು ಖುಷಿ ನೀಡಿದೆ’ ಎಂದವರು ಸಂತಸ ಹಂಚಿಕೊoಡರು.