ಕೆನರಾ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 20 ಲಕ್ಷ ರೂ ಹೊಂದಿದ್ದ ಜಗದೀಶ ನಾಯ್ಕರ ಹಣ ಕಳ್ಳರ ಪಾಲಾಗಿದೆ. ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರು ಆ ಹಣ ಲಪಟಾಯಿಸಿದ್ದಾರೆ.
ಭಟ್ಕಳದ ಬೆಳಕೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬೆಳಕೆಯ ಜಗದೀಶ ಲಚ್ಚಯ್ಯ ನಾಯ್ಕ ಖಾತೆ ಹೊಂದಿದ್ದರು. ತಮ್ಮ ಖಾತೆಯಲ್ಲಿ ಅವರು ಹಣ ಉಳಿಸಿಕೊಂಡಿದ್ದರು. ಫೆಬ್ರವರಿ 8 ರಿಂದ 9ರ ಬೆಳಗ್ಗೆ 8.20ರ ಅವಧಿಯಲ್ಲಿ ಅವರ ಖಾತೆಯಲ್ಲಿದ್ದ ಹಣ ಕಣ್ಮರೆಯಾಗಿದೆ.
ಒಟ್ಟೂ 2021452ರೂ ನಾಪತ್ತೆಯಾದ ಬಗ್ಗೆ ಅರಿತ ಅವರು ಬ್ಯಾಂಕಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಸೈಬರ್ ವಂಚಕರು ಹಣ ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.