ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಮಂತ್ರಿ ಸಂಜಯ್ ಸೇತ್ ಬುಧವಾರ ಕಾರವಾರದ ಭಾರತೀಯ ನೌಕಾನೆಲೆಗೆ ( Seabird ) ಭೇಟಿ ನೀಡಿದ್ದು, ಅವರನ್ನು ಭೇಟಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳೀಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. `S News ಡಿಜಿಟಲ್’
ಪೂರ್ವ ನಿಯೋಜಿತ ಕಾರ್ಯಕ್ರಮಕ್ಕಾಗಿ ಕಾರವಾರಕ್ಕೆ ತೆರಳಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾರತೀಯ ನೌಕಾನೆಲೆಗೆ ( Seabird ) ಭೇಟಿ ನೀಡಿ ನೌಕಾ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಕೇಂದ್ರ ಸಚಿವರನ್ನು ಭೇಟಿ ಮಾಡಿ `ಭಾರತೀಯ ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಇಲ್ಲಿನ ಯುವಕರು ವಿದ್ಯೆ ಹಾಗೂ ಸಾಹಸ ಚಟುವಟಿಕೆಗಳಲ್ಲಿ ಉದ್ಯೋಗ ಪಡೆಯಲು ಅರ್ಹರಿದ್ದು ಅವರಿಗೆ ಯೋಗ್ಯ ತರಬೇತಿ ನೀಡಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.
`ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಕಾಮಗಾರಿ ನಡೆಸಿ’ ಎಂದು ನೌಕಾನೆಲೆ ಅಧಿಕಾರಿಗಳಿಗೆ ಸೂಚಿಸಿದರು. `ಪ್ರತಿ ವರ್ಷ ಮಳೆಗಾಲದಲ್ಲಿ ನೌಕಾನೆಲೆ ಹೊರಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ನೆರೆ ಪ್ರವಾಹ ಸೃಷ್ಠಿಯಾಗಿ ಜನರ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಬಾರಿ ಸಹ ಅದು ಪುನರಾವರ್ತನೆಯಾಗಿದ್ದು, ಜನರಿಗೆ ತೊಂದರೆ ಆಗದಂತೆ ನೌಕಾನೆಲೆ ಕೆಲಸ ನಿರ್ವಹಿಸಬೇಕು’ ಹೇಳಿದರು. ಈ ವೇಳೆ ಸಚಿವ ಹಾಗೂ ಸಂಸದರು ವಿಕ್ರಮಾಧಿತ್ಯ ಯುದ್ಧನೌಕೆ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ವೀಕ್ಷಿಸಿದರು.
`S News ಡಿಜಿಟಲ್’
Discussion about this post