ಶಿರಸಿ: ಹಿಂದೂ ಯುವತಿ ಮುಸ್ಲಿಂ ಯುವಕನ ವಿವಾಹಕ್ಕೆ ಆಸಕ್ತಿ ತೋರಿದ್ದು, ವಿವಾಹ ನೊಂದಣಿಗಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಕೆಯಾಗಿದೆ.
ಈ ಬಗ್ಗೆ ನೊಂದಣಿ ಕಚೇರಿಯಲ್ಲಿ ಸೂಚನಾ ಫಲಕದಲ್ಲಿ ನೋಟಿಸ್ ಅಂಟಿಸಲಾಗಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. `ಹಿಂದೂ ಯುವತಿಯ ಮನವೋಲೈಸಬೇಕು’ ಎಂದು ಅನೇಕರು ಅಭಿಪ್ರಾಯ ಹಂಚಿಕೊAಡಿದ್ದಾರೆ. `ಯುವತಿ ಪಾಲಕರಿಗೆ ವಿಷಯ ಮುಟ್ಟುವವರೆಗೂ ಈ ಮೆಸೆಜ್ ಶೇರ್ ಮಾಡಿ’ ಎಂದು ಸಹ ಅನೇಕರು ಸಂದೇಶಗಳನ್ನು ಹರಿಬಿಟ್ಟಿದ್ದಾರೆ. ನ 19ರಂದು ನೊಂದಣಾಧಿಕಾರಿ ಕಚೇರಿ ಸೂಚನಾ ಫಲಕದಲ್ಲಿ ಈ ನೋಟಿಸ್ ಅಂಟಿಸಲಾಗಿದ್ದು, ನ 21 ಹಾಗೂ 22ರಂದು ಭಾರೀ ಪ್ರಮಾಣದಲ್ಲಿ ನೋಟಿಸ್ ಪ್ರತಿಗಳು ಶೇರ್ ಆಗಿವೆ.
ಅರೆಕೊಪ್ಪದ ಯುವಕ ಅಹ್ಮದ್ ಹಾಗೂ ರಾಮನಬೈಲಿನ ಚೈತ್ರಾ (ಹೆಸರು ಬದಲಿಸಿದೆ) ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಒಪ್ಪಿಗೆಯಿಂದ ವಿವಾಹ ನೊಂದಣಿಗೆ ಅರ್ಜಿ ಸಲ್ಲಿಕೆಯಾಗಿದೆ. ನೊಂದಣಿ ಅಧಿಕಾರಿಗಳು ನಿಯಮಗಳ ಪ್ರಕಾರ ಒಂದು ತಿಂಗಳ ಮುಂಚಿತವಾಗಿ ನೋಟಿಸ್ ಬೋರ್ಡಿಗೆ ಈ ಇಬ್ಬರ ಫೋಟೋ ಜೊತೆ ಮಾಹಿತಿ ಪ್ರದರ್ಶಿಸಿದ್ದಾರೆ.
ಈ ಬಗ್ಗೆ ಮಾಹಿತಿ ಅರೆತ ಕೆಲ ಸಂಘಟನೆಯವರು ಮದುವೆ ಮುರಿಯುವ ಮಾತುಕಥೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲವ್ ಜಿಹಾದ್, ಮತಾಂತರದ ಮಾತುಗಳು ಜೋರಾಗಿ ನಡೆದಿವೆ. ಗಂಡು-ಹೆಣ್ಣು ಎರಡು ಕಡೆಯವರ ಮನವೊಲೈಸುವ ಪ್ರಯತ್ನ ಮುಂದುವರೆದಿದ್ದು, ಅಂತಿಮ ನಿರ್ಣಯ ಹೊರಬಿದ್ದಿಲ್ಲ. ಈ ಮದುವೆ ವಿಷಯವಾಗಿ ಅನಾಹುತ ನಡೆಯದಂತೆ ಪೊಲೀಸರು ಸಹ ಎಚ್ಚರವಹಿಸಿದ್ದಾರೆ.