ಹಳಿಯಾಳ: ಯಲ್ಲಾಪುರ ನಾಕೆ ಬಳಿ ವ್ಯಾಪಾರ ಮಳಿಗೆ ನಡೆಸುತ್ತಿರುವ ಅಬ್ಬಾಸ ಅಲಿ ಗೌಸ್ ಮೋಹಿದ್ದೀನ್ ಪಟೇಲ್’ನ ಮಳಿಗೆಯಲ್ಲಿ ಸರ್ಕಾರಿ ಅಕ್ಕಿ ಅಕ್ರಮ ದಾಸ್ತಾನು ಇರುವುದನ್ನು ಆಹಾರ ನಿರೀಕ್ಷಕ ಸಂತೋಷ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ.
ಜೋಗಿನಕೊಪ್ಪದ ಅಬ್ಬಾಸ್ ಅಲಿ ಮಾರುತಿ ಗಲ್ಲಿಯ ಜಂ ಜಂ ಜ್ಯೂಸ್ ಸೆಂಟರ್ ಬಳಿ ವ್ಯಾಪಾರ ಮಳಿಗೆಯನ್ನು ಹೊಂದಿದ್ದ. ಬಡ ಜನರಿಗೆ ಸರ್ಕಾರದಿಂದ ವಿತರಿಸುವ ಅಕ್ಕಿಯನ್ನು ಈತ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ. ಬಡ ಜನರಿಗೆ ಆಮೀಷ ಒಡ್ಡಿ ಅಕ್ಕಿ ಖರೀದಿಸುವುದರ ಜೊತೆ ಪಡಿತರ ಅಂಗಡಿಗಳಿAದಲೂ ಆತ ಅದನ್ನು ಸಂಗ್ರಹಿಸುತ್ತಿದ್ದ. ದುಬಾರಿ ಬೆಲೆಗೆ ಈ ಅಕ್ಕಿ ಮಾರಾಟ ಮಾಡಿ ಹಣಗಳಿಸಿದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದರು.
ಈ ಹಿನ್ನಲೆ ಅಂಗಡಿ ಮೇಲೆ ಆಹಾರ ಅಧಿಕಾರಿಗಳು ದಾಳಿ ನಡೆಸಿದರು. ಆಗ ಅಲ್ಲಿ 1788 ಕೆಜಿ ಸರ್ಕಾರಿ ಅಕ್ಕಿ ಸಿಕ್ಕಿದೆ. ಇದಕ್ಕೆ ಸಂಬAಧಿಸಿದ ಯಾವುದೇ ಕಾಗದ-ಪತ್ರಗಳು ವ್ಯಾಪಾರಿ ಬಳಿ ಇರಲಿಲ್ಲ. 50 ಸಾವಿರ ರೂ ಮೌಲ್ಯದ ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಹಿನ್ನಲೆ ಆತನ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.