6

ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ `ಮನೆ’ ದೇವರು!

ಮನೆ ನಿರ್ಮಾಣದ ವೇಳೆ ಮೂರು ಮರ ಕಡಿತ ತಪ್ಪಿನ ಪ್ರಾಯಶ್ಚಿತಕ್ಕಾಗಿ ಡಾ ಕಿರಣ್ ಎಂಬ ವಿಜ್ಞಾನಿ ಕುಮಟಾ ಬಳಿಯ ಹಿರೆಗುತ್ತಿಯಲ್ಲಿ 101 ಗಿಡಗಳನ್ನು ನೆಟ್ಟಿದ್ದು, ಅದರ ಸಂಪೂರ್ಣ ಆರೈಕೆಯ ಹೊಣೆ ಹೊತ್ತಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರಾದ ಡಾ ಕಿರಣ್ ಅಂಕ್ಲೇಕರ್ ಅವರು ಓದಿದ್ದು, ಬೆಳೆದಿದ್ದು ಎಲ್ಲವೂ ಗೋಕರ್ಣದಲ್ಲಿ. ವನ್ಯಜೀವಿ ಛಾಯಾಚಿತ್ರದಲ್ಲಿಯೂ ಆಸಕ್ತಿ ಇರುವ ಅವರು ವನ್ಯಜೀವಿ ಹಾಗೂ ಇತರೆ ಪ್ರಾಣಿಗಳ ಆರೋಗ್ಯಕ್ಕೆ ಸಂಬoಧಿಸಿದ ಕಂಪನಿಯಲ್ಲಿ ವಿಜ್ಞಾನಿಯಾಗಿದ್ದಾರೆ. ಪುಣೆಯಲ್ಲಿರುವ ಅವರು ಕಂಪನಿ ತಯಾರಿಸುವ ಔಷಧಗಳ ಗುಣಮಟ್ಟ ಕಾಯ್ದಿರಿಸುವಿಕೆಯ ಜವಾಬ್ದಾರಿ ಹೊಂದಿದ್ದಾರೆ.
ಎoದಿಗೂ ಬೇರೆಯವರ ಮನಸ್ಸು ನೋಯಿಸದ ಅವರು ಕಳೆದ ವರ್ಷ ಅನಿವಾರ್ಯವಾಗಿ 2 ತೆಂಗು ಹಾಗೂ 1 ಮಾವಿನ ಮರ ತೆಗೆಸಿದರು. ಬಾಲ್ಯದಲ್ಲಿ ಫಲ ಕೊಟ್ಟ ಮರ ನಾಶವಾಗುವುದನ್ನು ನೋಡಲು ಅವರಿಂದ ಆಗಲಿಲ್ಲ. ಮರ ಕಡಿಸಿದ ನೋವು ಅವರನ್ನು ನಿತ್ಯ ಕಾಡಿಸುತ್ತಿತ್ತು. ಆ ಮರಗಳ ಸಾವಿನ ಸೂತಕದಿಂದ ಹೊರಬರಲಾರದೇ ಅವರು ಒದ್ದಾಡುತ್ತಿದ್ದರು. ಮಾಡಿದ ತಪ್ಪಿನ ಪ್ರಾಯಶ್ಚಿತಕ್ಕಾಗಿ 101 ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ ಅವರು ಆ ಗಿಡಗಳ ಕಾವಲು, ನೀರುಣಿಸುವುದು ಸೇರಿ ಅವುಗಳ ಬೆಳವಣಿಗೆಯ ಸಮಗ್ರ ಹೊಣೆವಹಿಸಿಕೊಂಡಿದ್ದಾರೆ.

ಮಕ್ಕಳು – ಶಿಕ್ಷಕರು ಹಾಗೂ ಅರಣ್ಯಾಧಿಕಾರಿಗಳ ಸಾಕ್ಷಿಯಾಗಿ 101 ಗಿಡ ನೆಟ್ಟು ಅವುಗಳ ಆರೈಕೆಯ ಹೊಣೆ ಹೊತ್ತ ಡಾ ಕಿರಣ್ ಅಂಕ್ಲೇಕರ್

ಪರರಾಜ್ಯದಲ್ಲಿದ್ದರೂ ಹಾತೊರೆಯುವ ಕನ್ನಡ ಮನ:
ಇನ್ನೂ ಕಲೆ, ಸಾಹಿತ್ಯ, ನಾಟಕ, ಸಂಗೀತದಲ್ಲಿಯೂ ಅವರಿಗೆ ಅಪಾರ ಆಸಕ್ತಿ. ಹೀಗಾಗಿ `ಸಂಗಾಡಿ ಬಳಗ’ ಎಂಬ ತಂಡಕಟ್ಟಿಕೊoಡು ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ. ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ ಅವರು ತಾವು ಸಂಚರಿಸಿದ 20 ದೇಶಗಳಲ್ಲಿಯೂ ಕನ್ನಡಿಗರನ್ನು ಕೊಂಡಾಡಿದ್ದಾರೆ. ಜಿಲ್ಲೆಯ ಸಂಸ್ಕೃತಿಗಳ ಬಗ್ಗೆ ಇತರರಿಗೆ ಪರಿಚಯಿಸಿದ್ದಾರೆ. ಗೋಕರ್ಣದಲ್ಲಿ ಬಾಲ್ಯ ಕಳೆದ ನೆನಪುಗಳ ಬಗ್ಗೆ ಪುಸ್ತಕ ಬರೆಯುತ್ತಿದ್ದು, `ನೂರೊಂದು ಹನಿಗವನ’ ಎಂಬ ಇನ್ನೊಂದು ಪುಸ್ತಕವೂ ಸಿದ್ಧವಾಗಿದೆ. `ನನ್ನ ತಂದೆ-ತಾಯಿ ಶಿಕ್ಷಕರಾಗಿದ್ದರು. ನನ್ನ ಎಲ್ಲಾ ಒಳ್ಳೆಯ ಕೆಲಸಗಳಿಗೆ ಅವರೇ ಪ್ರೇರಣೆ’ ಎನ್ನುತ್ತ ಡಾ ಕಿರಣ್ ಭಾವುಕರಾದರು.

  • Related Posts

    ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!

    Share this… Facebook Pinterest Twitter Linkedin Whatsappಹಾವೇರಿ ಜಿಲ್ಲೆಗೆ ಮತ್ತೊಂದು ಮಹತ್ವದ ಜವಾಬ್ದಾರಿ ಸಿಕ್ಕಿದೆ..! ಶಿಗ್ಗಾಂವಿ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳ ವಿವಿಧ…

    ಗುರಿಯ ಆಯ್ಕೆಯೇ ಯಶಸ್ಸಿನ ಮೊದಲ‌ ಹೆಜ್ಜೆ

    Share this… Facebook Pinterest Twitter Linkedin Whatsappನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ ನಮ್ಮ ಮೊದಲ ಮತ್ತು ಅತಿ ಮುಖ್ಯವಾದ ಹೆಜ್ಜೆ ಗುರಿ ನಿಗದಿಪಡಿಸುವುದಾಗಿರಬೇಕು. ನಿರ್ದಿಷ್ಟ ಗುರಿಗಳಿಲ್ಲದ ಜೀವನವು ದಿಕ್ಸೂಚಿಯಿಲ್ಲದ ಹಡಗಿನಂತೆ ಆಗುತ್ತದೆ. ನಿಖರವಾದ ಗುರಿಗಳು ನಮ್ಮ ಪ್ರಯತ್ನಗಳಿಗೆ ಒಂದು…

    Leave a Reply

    Your email address will not be published. Required fields are marked *

    You cannot copy content of this page