6

ಬಳ್ಳಿ ನೆಟ್ಟು ಬರ ಓಡಿಸಿದ ಯುವಕ

ಅಡಿಕೆ ಮರ ಏರುವ ಕೆಲಸ ಮಾಡುತ್ತಿದ್ದ ಭರತನಳ್ಳಿಯ ದೀನು ಮರಾಠಿ ಮರದಿಂದ ಬಿದ್ದು ಆ ವೃತ್ತಿ ತೊರೆಯುವಂತಾಗಿದ್ದು, ಮೂರು ವರ್ಷದ ಹಿಂದೆ ಅವರು ಪ್ರೀತಿಯಿಂದ ಆರೈಕೆ ಮಾಡಿದ್ದ ಗಿಡಗಳೇ ಅವರ ಬದುಕಿಗೆ ಆಸರೆಯಾಗಿದೆ. ಕಷ್ಟಕಾಲದಲ್ಲಿ ಅವರ ಬದುಕಿಗೆ ಅಂಟಿದ್ದ ಆರ್ಥಿಕ ‘ಬರ’ವನ್ನು ಆ ಬಳ್ಳಿಗಳು ದೂರ ಮಾಡಿವೆ.

ಶಿರಸಿ-ಯಲ್ಲಾಪುರ ರಸ್ತೆಯ ಮಾವಿನಕಟ್ಟಾ ಬಳಿಯಿರುವ ಭರತನಳ್ಳಿಯಲ್ಲಿ ದೀನು ಗೌಡ ಭೂಮಿ ಹೊಂದಿದ್ದಾರೆ. ಅಲ್ಲಿ ಅವರು ಅಡಿಕೆ ಗಿಡದ ಜೊತೆ ಕಾಳು ಮೆಣಸು ಬೆಳೆದಿದ್ದು, ಆ ಕಾಳು ಮೆಣಸಿನ ಗಿಡ ಇದೀಗ ಅವರ ಜೀವನಕ್ಕೆ ಆಧಾರವಾಗಿದೆ. ಇಲ್ಲಿನ 1 ಎಕರೆ ಭೂಮಿಯಲ್ಲಿನ ಅಡಿಕೆ ಮರಗಳಿಗೆ ಅವರು ನಾಲ್ಕು ವರ್ಷದ ಹಿಂದೆ 450 ಮೆಣಸಿನ ಬಳ್ಳಿ ನೆಟ್ಟಿದ್ದರು. ಸಾಧಕ ಕೃಷಿಕ ಷಣ್ಮುಖ ಗೌಡ ಅವರ ಸಲಹೆ ಮೇರೆಗೆ ಆ ಗಿಡಗಳ ಆರೈಕೆ ಮಾಡಿದ್ದರು. ಪ್ರತಿ ಮರದ ಬುಡದಲ್ಲಿ ಎರಡು ಕುಡಿ ನೆಟ್ಟು, ನಂತರ ಆರೋಗ್ಯವಂತ ಒಂದು ಕುಡಿಯನ್ನು ಅವರು ಉಳಿಸಿಕೊಂಡಿದ್ದರು. ಗಿಡಗಳ ಆಹಾರಕ್ಕಾಗಿ ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ ಉಣಿಸುತ್ತಿದ್ದರು. ರೋಗ ಬಾರದಂತೆ ತುತ್ತ-ಸುಣ್ಣ ಸಿಂಪಡಿಸುತ್ತಿದ್ದರು.

ಅತ್ಯoತ ಕಾಳಜಿ ಹಾಗೂ ಪ್ರೀತಿಯಿಂದ ಗಿಡ ಆರೈಕೆ ಮಾಡಿದ ಪ್ರತಿಫಲವಾಗಿ 450 ಗಿಡಗಳಿಂದ ಮೂರನೇ ವರ್ಷದಲ್ಲಿ 90 ಕೆಜಿ ಹಾಗೂ ನಾಲ್ಕನೇ ವರ್ಷದಲ್ಲಿ 3.30 ಕ್ವಿಂಟಲ್ ಒಣ ಕಾಳುಮೆಣಸನ್ನು ಅವರು ಪಡೆದಿದ್ದಾರೆ. ಕಳೆದ ವರ್ಷ ಮರದಿಂದ ಬಿದ್ದ ನೋವುಸಹಿಸಿಕೊಂಡು ಈಗಷ್ಟೇ ನಡೆಯಲು ಶುರು ಮಾಡಿದ 32 ವರ್ಷದ ದೀನು ಮರಾಠಿ ಅವರಿಗೆ ಯಾವ ಕೆಲಸ ಮಾಡಲು ಅಸಾಧ್ಯ. ಹೀಗಿರುವಾಗ ಮೊದಲು ಆರೈಕೆ ಮಾಡಿದ್ದ ಕಾಳು ಮೆಣಸಿನ ಕೃಷಿ ಅವರ ಬದುಕನ್ನು ಮುನ್ನೆಡೆಸುತ್ತಿದೆ.

ಅದೇ ಊರಿನ ಪ್ರಗತಿಪರ ಕೃಷಿಕ ಷಣ್ಮುಖ ಗೌಡ ಮಾರ್ಗದರ್ಶನದಲ್ಲಿ ಅವರು ಕಾಳು ಮೆಣಸು ಬೆಳೆದವರು. ಇವರ ತೋಟ ನೋಡಬಯಸುವವರು ಫೋನ್ ಮಾಡಿ ಬರಬಹುದು. ಮೋ: 8277125221

  • Related Posts

    ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!

    Share this… Facebook Pinterest Twitter Linkedin Whatsappಹಾವೇರಿ ಜಿಲ್ಲೆಗೆ ಮತ್ತೊಂದು ಮಹತ್ವದ ಜವಾಬ್ದಾರಿ ಸಿಕ್ಕಿದೆ..! ಶಿಗ್ಗಾಂವಿ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳ ವಿವಿಧ…

    ಗುರಿಯ ಆಯ್ಕೆಯೇ ಯಶಸ್ಸಿನ ಮೊದಲ‌ ಹೆಜ್ಜೆ

    Share this… Facebook Pinterest Twitter Linkedin Whatsappನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ ನಮ್ಮ ಮೊದಲ ಮತ್ತು ಅತಿ ಮುಖ್ಯವಾದ ಹೆಜ್ಜೆ ಗುರಿ ನಿಗದಿಪಡಿಸುವುದಾಗಿರಬೇಕು. ನಿರ್ದಿಷ್ಟ ಗುರಿಗಳಿಲ್ಲದ ಜೀವನವು ದಿಕ್ಸೂಚಿಯಿಲ್ಲದ ಹಡಗಿನಂತೆ ಆಗುತ್ತದೆ. ನಿಖರವಾದ ಗುರಿಗಳು ನಮ್ಮ ಪ್ರಯತ್ನಗಳಿಗೆ ಒಂದು…

    Leave a Reply

    Your email address will not be published. Required fields are marked *

    You cannot copy content of this page