6

ಔಷಧಿಯೂ ಹೌದು ಈ ನಾಗಲಿಂಗ ಪುಷ್ಪ

ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಪ್ರಾಣಿ, ಗಿಡ-ಮರಗಳಲ್ಲಿಯೂ ದೇವರನ್ನು ನೋಡಲಾಗುತ್ತದೆ. ಅದರಂತೆ ನಾಗಲಿಂಗ ಪುಷ್ಪ ಎಂಬ ಮರ ನಾಡಿನ ಎಲ್ಲಾ ಕಡೆ ಪೂಜನೀಯ ಸ್ಥಾನ ಪಡೆದಿದೆ. ದಕ್ಷಿಣ ಅಮೇರಿಕಾ ಮೂಲದ ಈ ಗಿಡ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಹ ಕಂಡು ಬರುತ್ತದೆ. ನಾಗಲಿಂಗ ಮರದ ಹೂವಿನಲ್ಲಿ ಹೆಸರೇ ಹೇಳುವಂತೆ ನಾಗರ ಹಾಗೂ ಲಿಂಗದ ರಚನೆ ಇರುತ್ತದೆ. ನಾಗ ಸಂಪಿಗೆ ಎಂಬುದು ಈ ಮರದ ಇನ್ನೊಂದು ಹೆಸರು.

ಈ ಹೂವುಗಳಿಗೆ ಆಕರ್ಷಕ ಸುಗಂಧವಿದೆ. ಇದರ ಪರಿಮಳಕ್ಕೆ ಹಾವುಗಳು ಹತ್ತಿರ ಬರುತ್ತವೆ ಎಂದು ನಂಬಲಾಗಿದೆ. ಆದರೆ, ಮರಕ್ಕೆ ಹಣ್ಣಾದಾಗ ಸುವಾಸನೆ ಹೋಗಿ ದುರ್ವಾಸನೆ ಬರುತ್ತದೆ. ಹಣ್ಣು ಬಿದ್ದ ನಂತರ ಅದನ್ನು ಪ್ರಾಣಿಗಳು ತಿನ್ನುತ್ತವೆ. ಪ್ರಾಣಿಗಳ ದೇಹದಿಂದ ಬೀಜ ಹೊರ ಹೋದಾಗ ಗಿಡ ಹುಟ್ಟಿ ಬೆಳೆಯುತ್ತದೆ. ಮರದ ಬುಡದಲ್ಲಿ ಬಿದ್ದ ಬೀಜ ಗಿಡವಾಗುವುದು ಅಪರೂಪ.

ಶೀತ ಹಾಗೂ ಹೊಟ್ಟೆನೋವಿಗೆ ಈ ಹೂವಿನಲ್ಲಿ ಔಷಧಿಯಿದೆ. ಎಲೆಗಳ ರಸವನ್ನು ಚರ್ಮರೋಗಕ್ಕೆ ಬಳಸುತ್ತಾರೆ. ಮಲೇರಿಯಾ ರೋಗಕ್ಕೆ ಸಹ ಇದು ಔಷಧಿಯಾಗಿದೆ. ನಾಗಲಿಂಗ ಪುಷ್ಪಗಳಲ್ಲಿ ಮಕರಂದವಿಲ್ಲದಿದ್ದರೂ, ಅದರ ಬಣ್ಣ ಮತ್ತು ಸುವಾಸನೆ ಅರೆಸಿ ಜೇನು ನೊಣಗಳು ಹೋಗುತ್ತವೆ. ಅಲ್ಲಿಂದ ಪರಾಗವನ್ನು ಸಂಗ್ರಹಿಸುತ್ತವೆ. ಸಾಮಾನ್ಯವಾಗಿ ಇತರ ಮರಗಳಲ್ಲಿ ರೆಂಬೆ, ಕೊಂಬೆಗಳ ತುದಿಯಲ್ಲಿ ಹೂ ಬಿಟ್ಟರೆ, ಇದಕ್ಕೆ ಕಾಂಡದಲ್ಲಿಯೇ ಹೂ ಅರಳುತ್ತದೆ. ಒಟ್ಟಿನಲ್ಲಿ ಇದೊಂದು ಅಪರೂಪದ ಮತ್ತು ಆಕರ್ಷಕ ಮರ ಎಂಬುದರಲ್ಲಿ ಎರಡು ಮಾತಿಲ್ಲ.

  • ಜಯಲಕ್ಷ್ಮಿ ಭಟ್, ಪುತ್ತೂರು
  • Related Posts

    ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!

    Share this… Facebook Pinterest Twitter Linkedin Whatsappಹಾವೇರಿ ಜಿಲ್ಲೆಗೆ ಮತ್ತೊಂದು ಮಹತ್ವದ ಜವಾಬ್ದಾರಿ ಸಿಕ್ಕಿದೆ..! ಶಿಗ್ಗಾಂವಿ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳ ವಿವಿಧ…

    ಗುರಿಯ ಆಯ್ಕೆಯೇ ಯಶಸ್ಸಿನ ಮೊದಲ‌ ಹೆಜ್ಜೆ

    Share this… Facebook Pinterest Twitter Linkedin Whatsappನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ ನಮ್ಮ ಮೊದಲ ಮತ್ತು ಅತಿ ಮುಖ್ಯವಾದ ಹೆಜ್ಜೆ ಗುರಿ ನಿಗದಿಪಡಿಸುವುದಾಗಿರಬೇಕು. ನಿರ್ದಿಷ್ಟ ಗುರಿಗಳಿಲ್ಲದ ಜೀವನವು ದಿಕ್ಸೂಚಿಯಿಲ್ಲದ ಹಡಗಿನಂತೆ ಆಗುತ್ತದೆ. ನಿಖರವಾದ ಗುರಿಗಳು ನಮ್ಮ ಪ್ರಯತ್ನಗಳಿಗೆ ಒಂದು…

    Leave a Reply

    Your email address will not be published. Required fields are marked *

    You cannot copy content of this page