6

ಯಕ್ಷಶ್ರೀ: ತಮ್ಮಣ್ಣಿಗೆ’ಯ ಈ ಅಣ್ಣ ಮಾತುಗಾರಿಕೆಗೂ ಸೈ – ಕುಣಿಯುವುದಕ್ಕೂ ಜೈ!

ಉತ್ತರ ಕನ್ನಡದ ಜೊಯಿಡಾ ತಾಲೂಕಿನಲ್ಲಿ `ತಮ್ಮಣಿಗೆ’ ಎಂಬ ಗ್ರಾಮವಿದೆ. ಐದು ಶತಮಾನದ ಹಿಂದಿನ ಇತಿಹಾಸದ ಕುರುಹುಗಳಿರುವ ಈ ಊರಿನ ಮನೆಗಳಲ್ಲಿ ಲಿಂಗರೂಪಿ ಶಿವ, ಪಾರ್ವತಿಸಹಿತ ಬಿಂಬ ರೂಪದಿಂದ ತುಂಬಾ ಪ್ರಾಚೀನ ಕಾಲದಿಂದಲೂ ಪೂಜಿಸಲ್ಪಡುತ್ತಿದ್ದಾನೆ. ಇಲ್ಲಿ ನಡೆಯುವ ಅನಂತನ ವ್ರತಕ್ಕೆ ದೀರ್ಘಕಾಲದ ಐತಿಹ್ಯವಿದೆ. ಈ ವೃತಾಂಗವಾಗಿ ನಡೆಯುವ ಜಾಗರಣೆಗೆ ಪ್ರತಿ ವರ್ಷವೂ ತಾಳಮದ್ದಲೆಯೊಂದು ನಡೆಯುತ್ತಿತ್ತು. ಹೀಗೆ ನಡೆಯುವ ತಾಳಮದ್ದಳೆಯ ಮದ್ದಳೆ ಸದ್ದೇ ಹೃದಯ ಬಡಿತವಾಗಿ ಹುಟ್ಟಿ, ಭಾಗವತಿಕೆಯ ತಾಳ ಲಯಗಳಿಗೆ ಹೆಜ್ಜೆ ಹಾಕಿ ಬೆಳೆದವರು ತಮ್ಮಣಿಗೆ ನಾರಾಯಣ ಹೆಗಡೆಯವರು.
ಸುಮಾರು 40 ವರ್ಷಗಳ ಹಿಂದೆ ಬರಬಳ್ಳಿಯಲ್ಲಿ ಯಕ್ಷಗಾನ ಪ್ರಸಂಗವೊoದು ನಡೆದಿತ್ತು. ಆ ದಿನದ ಕಥಾನಕ ಕಾರ್ತವೀರ್ಯಾರ್ಜುನ ಕಾಳಗ – ಶೂರ್ಪನಖಾ ವಿವಾಹ – ರೇಣುಕಾ ಚರಿತ್ರೆ. ಅಂದು ತಮ್ಮಣಿಗೆ ನಾರಾಯಣ ಹೆಗಡೆಯವರ ಕಾರ್ತವೀರ್ಯನ ಪಾತ್ರವಾಗಿತ್ತು. ಸಭೆಯನ್ನು ಮಂತ್ರಮುಗ್ಧಗೊಳಿಸುವ ಆಯ, ಆಕಾರಸಹಿತವಾದ ಶಿಸ್ತಿನ ಕಿರೀಟ ವೇಷ ಅಲ್ಲಿತ್ತು. ಸಭೆಯನ್ನೆಲ್ಲ ವ್ಯಾಪಿಸಿ ನಿಲ್ಲುವ ಪ್ರಭಾವಯುತವಾದ ಗತ್ತು ಗಾಂಭೀರ್ಯ. ನಾರಾಯಣ ಹೆಗಡೆಯವರ ಈ ವೇಷ ಸೌಂದರ್ಯವೇ ಪಾತ್ರವನ್ನು ಅರ್ಧ ಗೆಲ್ಲಿಸಿ ಬಿಡುತ್ತಿತ್ತು. ಎಂಬತ್ತರ ದಶಕದಲ್ಲಿ ತಮ್ಮಣಿಗೆ ನಾರಾಯಣ ಹೆಗಡೆಯವರು ರೂಪ, ಆಕಾರ, ವೇಷದ ಶಿಸ್ತು, ನೃತ್ಯ, ಅಭಿನಯ, ತಾಳ ಲಯಗಳ ತಿಳುವಳಿಕೆ, ಸಾಹಿತ್ಯ ಜ್ಞಾನ, ಮಾತುಗಾರಿಕೆ, ಧ್ವನಿ ಸೌಂದರ್ಯ ಎಲ್ಲವೂ ಹದವಾಗಿ ಮಿಳಿತವಾಗಿರುವ ಏಕೈಕ ಕಲಾವಿದರಾಗಿದ್ದರು. ಹವ್ಯಾಸಿ ಆಟಗಳಲ್ಲಿ ಇಂತಹ ಪರಿಪೂರ್ಣ ವೇಷ ಅಪರೂಪದಲ್ಲಿಯೇ ಅಪರೂಪವಾಗಿತ್ತು.
ಅವರು ರಂಗಸ್ಥಳದಲ್ಲಿ ಕ್ರಿಯೆ ಅಥವಾ ಪ್ರತಿಕ್ರಿಯೆಗಳಿಂದ ಪಾತ್ರದ ಜೀವಂತಿಕೆಯನ್ನು ಸದಾ ಕಾಯ್ದುಕೊಂಡಿರುತ್ತಿದ್ದರು. ಅಂದರೆ ಆಯಾ ಪಾತ್ರದ ಪದ್ಯಕ್ಕೆ ಮಾತ್ರ ಸ್ಪಂದಿಸಿ, ನಂತರ ಸುಮ್ಮನಗುವ ಯಾಂತ್ರೀಕೃತ ಪಾತ್ರಕ್ರಮ ಹೆಗಡೆಯವರದಲ್ಲ. ಎದುರಾಳಿಯನ್ನು ಮಾತಿನಿಂದ ಕಟ್ಟಿ ಹಾಕುವ ಕಲೆ ತಾಳಮದ್ದಳೆಯಿಂದ ಹೆಗಡೆಯವರಲ್ಲಿ ಬೆಳೆದಿತ್ತು. ನಾರಾಯಣ ಹೆಗಡೆಯವರು ತಕ್ಕಮಟ್ಟಿಗೆ ಮದ್ದಳೆ ನುಡಿಸುವುದನ್ನೂ ತಿಳಿದವರು. ಹೀಗೆ ಯಕ್ಷಗಾನದ ಬಹುತೇಕ ಎಲ್ಲಾ ಅಂಗಗಳ ಪರಿಚಯ, ಪ್ರಯೋಗಾನುಭವ ಎರಡೂ ಇದ್ದವರು. ಯಕ್ಷಗಾನ ಆಟದಲ್ಲಿ ಕಾರ್ತವೀರ್ಯ, ಕೃಷ್ಣ, ಸುಧನ್ವನಂತ ಪಾತ್ರಗಳು, ಇವರ ದೇಹದ ವ್ಯಾಕರಣಕ್ಕೆ ಹೊಂದಿಕೆಯಾಗುವoತಹ ಪಾತ್ರಗಳು.
ನಾರಾಯಣ ಹೆಗಡೆಯವರು ಬಹುಕಾಲದ ಹಿಂದೆಯೇ ಚಂಡೆ ಮದ್ದಳೆಯ ಧ್ವನಿ ಆಕರ್ಷಿಸದಿರುವಷ್ಟು ಯಕ್ಷಗಾನದಿಂದ ದೂರ ಸರಿದಿದ್ದಾರೆ. ಅಪ್ರತಿಮ ಕಲಾವಿದರಾಗಿ ಬೆಳೆಯಬೇಕಿದ್ದ ನಾರಾಯಣ ಹೆಗಡೆಯವರು, ಕಾರಣಾಂತರಗಳಿAದ ಯಕ್ಷಗಾನದಿಂದ ಬಹುಬೇಗ ದೂರ ಸರಿದರು. ನಾರಾಯಣ ಹೆಗಡೆಯವರಿಗೆ ತಕ್ಕ ಸನ್ಮಾನ, ಪ್ರಶಸ್ತಿಗಳು ಸಂದಿಲ್ಲ. 80ರ ದಶಕದಲ್ಲಿ ಪದವಿಧರರಾಗಿದ್ದ ನಾರಾಯಣ ಹೆಗಡೆಯವರ ಮಾತುಗಾರಿಕೆ ಮತ್ತು ಮನೆತನದ ಹಿರಿತನಗಳು ಇವರನ್ನು ರಾಜಕೀಯ ವೇದಿಕೆಗೂ ತಂದು ನಿಲ್ಲಿಸಿತು. ಆದರೆ ಆ ಕ್ಷೇತ್ರ ಇವರಿಗೆ ಒಗ್ಗಲಿಲ್ಲ.

– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

  • Related Posts

    ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!

    Share this… Facebook Pinterest Twitter Linkedin Whatsappಹಾವೇರಿ ಜಿಲ್ಲೆಗೆ ಮತ್ತೊಂದು ಮಹತ್ವದ ಜವಾಬ್ದಾರಿ ಸಿಕ್ಕಿದೆ..! ಶಿಗ್ಗಾಂವಿ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳ ವಿವಿಧ…

    ಗುರಿಯ ಆಯ್ಕೆಯೇ ಯಶಸ್ಸಿನ ಮೊದಲ‌ ಹೆಜ್ಜೆ

    Share this… Facebook Pinterest Twitter Linkedin Whatsappನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ ನಮ್ಮ ಮೊದಲ ಮತ್ತು ಅತಿ ಮುಖ್ಯವಾದ ಹೆಜ್ಜೆ ಗುರಿ ನಿಗದಿಪಡಿಸುವುದಾಗಿರಬೇಕು. ನಿರ್ದಿಷ್ಟ ಗುರಿಗಳಿಲ್ಲದ ಜೀವನವು ದಿಕ್ಸೂಚಿಯಿಲ್ಲದ ಹಡಗಿನಂತೆ ಆಗುತ್ತದೆ. ನಿಖರವಾದ ಗುರಿಗಳು ನಮ್ಮ ಪ್ರಯತ್ನಗಳಿಗೆ ಒಂದು…

    Leave a Reply

    Your email address will not be published. Required fields are marked *

    You cannot copy content of this page