ಕಾಸಿನ ಆಸೆಗೆ ಭಾರತೀಯ ನೌಕಾನೆಲೆ ರಹಸ್ಯವನ್ನು ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ ಆರೋಪದ ಅಡಿ ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ಸಂಜೆಯವರೆಗೆ ಒಟ್ಟು 8 ಜನರನ್ನು ಬಂಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮುದುಗಾ ಬಳಿಯ ವೇತನ ತಾಂಡೇಲ ಹಾಗೂ ಅಂಕೋಲಾದ ಅಕ್ಷಯ ನಾಯ್ಕ ಸೇರಿ ಬಂಧಿತ 8 ಜನರ ವಿಚಾರಣೆ ಮುಂದುವರೆದಿದೆ. ಕೇರಳದ ಅಭಿಲಾಷ್ ಪಿ ಎ ಎಂಬಾತನ ಮೂಲಕ ಪಾಕಿಸ್ತಾನದ ಗುಪ್ತಚರ ಆಪರೇಟರ್ಗಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ರಹಸ್ಯ ವಿಷಯ ರವಾನೆಯಾಗುದ್ದ ವಿಷಯ ತನಿಖೆಯಿಂದ ಗೊತ್ತಾಗಿದೆ. ಭಾರತ ವಿರೋಧಿ ಸಂಚಿನ ಭಾಗವಾಗಿ ಭಾರತೀಯ ನೌಕಾಪಡೆಗೆ ಸಂಬAಧಿಸಿದ ಸೂಕ್ಷ್ಮ ಹಾಗೂ ಪ್ರಮುಖ ಮಾಹಿತಿ ಸೋರಿಕೆಗೆ ಸಂಬoಧಿಸಿದ ವಿಚಾರಣೆ ನಡೆಯುತ್ತಿದೆ.
ಈ ಬೇಹುಗಾರಿಕೆ ದಂಧೆಯಲ್ಲಿ ಪಾಕಿಸ್ತಾನಿ ಪ್ರಜೆ ಮೀರ್ ಬಾಲಾಜ್ ಖಾನ್ ಮತ್ತು ಆಕಾಶ್ ಸೋಲಂಕಿ ಎಂಬಾತರೊಬ್ಬರು ಭಾಗಿಯಾಗಿದ್ದರು ಎಂದು ಎನ್ಐಎ ತನಿಖೆಯಲ್ಲಿ ಗೊತ್ತಾಗಿದೆ. ಮೀರ್ ಬಾಲಾಜ್ ಮತ್ತು ಸೋಲಂಕಿ ಜೊತೆ ಪಿಐಒ ಅಲ್ವೆನ್, ಮನಮೋಹನ್ ಸುರೇಂದ್ರ ಪಾಂಡ ಮತ್ತು ಅಮಾನ್ ಸಲೀಂ ಶೇಖ್ ಎಂಬಾತರು ಸಹ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.
ಆರೋಪಿತರೆಲ್ಲರೂ ಕೊಚ್ಚಿಯ ನೌಕಾನೆಲೆಯಲ್ಲಿ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಜೊತೆಗೆ ಈ ಮಾಹಿತಿ ನೀಡಿದಕ್ಕಾಗಿ ಹಣವನ್ನು ಪಡೆಯುತ್ತಿದ್ದ ವಿಷಯವನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.