ಅಂಕೋಲಾದ ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರ್’ನಲ್ಲಿದ್ದ ಅನಿಲವನ್ನು ಬೇರೆ ಟ್ಯಾಂಕರಿಗೆ ತುಂಬಿಸುವ ಕೆಲಸ ಚುರುಕಿನಿಂದ ಸಾಗಿದೆ. ಅನಿಲ ಸೋರಿಕೆ ಪ್ರಮಾಣ ಇದೀಗ ನಿಯಂತ್ರಣಕ್ಕೆ ಬಂದಿದೆ.
ಅಪಘಾತದಲ್ಲಿ ಸಿಲುಕಿದ ವಾಹನದಲ್ಲಿ ಇನ್ನೂ ಅಲ್ಪ ಪ್ರಮಾಣದಲ್ಲಿ ಗ್ಯಾಸ್ ಇದ್ದು ಅದನ್ನು ಸಹ ಖಾಲಿ ಮಾಡಲಾಗುತ್ತಿದೆ. ಸಂಜೆಯ ಒಳಗೆ ಪೂರ್ತಿ ಪ್ರಮಾಣದಲ್ಲಿ ಗ್ಯಾಸ್ ಖಾಲಿ ಮಾಡುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಶಿರೂರು ಗುಡ್ಡ ಕುಸಿತದಲ್ಲಿ ಮೂರು ಟ್ಯಾಂಕರ್’ಗಳು ನೀರು ಪಾಲಾಗಿದ್ದವು. ಅದರಲ್ಲಿ ಒಂದು ಟ್ಯಾಂಕರ್’ನಲ್ಲಿ ಅನಿಲ ತುಂಬಿದ್ದು ಅಲ್ಲಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿ ರೀತಿಯಲ್ಲಿತ್ತು. ಸುತ್ತಲಿನ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿ, ಸಮೀಪ ಇದ್ದವರನ್ನು ಸ್ಥಳಾಂತರ ಸಹ ಮಾಡಿತ್ತು.
ಗ್ಯಾಸ್ ಸೋರಿಕೆಯ ಅಪಾಯದ ಹಿನ್ನಲೆ ಎಲ್ಲಡೆ ಕಟ್ಟೆಚ್ಚರವಹಿಸಲಾಗಿತ್ತು. ಮಂಗಳೂರಿನಿoದ ಆಗಮಿಸಿದ ತಜ್ಞರು ಅಪಘಾತವಾದ ಟ್ಯಾಂಕರ್’ನಲ್ಲಿದ್ದ ಅನಿಲವನ್ನು ಬೇರೆ ಟ್ಯಾಂಕರಿಗೆ ವರ್ಗಾಯಿಸುತ್ತಿದ್ದಾರೆ.
ಈ ಕುರಿತಾದ ವಿಡಿಯೋ ಇಲ್ಲಿ ನೋಡಿ..
Discussion about this post