ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಪರಿಶೀಲನೆಗೆ ಆಗಮಿಸಿದ ಸಚಿವ ಮಂಕಾಳು ವೈದ್ಯರಿಗೆ ಶನಿವಾರ ಹೆಲಿಕಾಪ್ಟರ್ ಸಿಗಲಿಲ್ಲ. ಗುಡ್ಡದ ಮೇಲ್ಬಾಗದಿಂದ ಪರಿಶೀಲನೆ ನಡೆಸಲು ಅವರು ಅಪಾಯಕಾರಿ ರೀತಿಯಲ್ಲಿ ಅಲ್ಲಿದ್ದ ಕ್ರೇನ್ ಏರಿ ಸರ್ಕಸ್ ಮಾಡಿದರು. ಕ್ರೇನ್’ನ ತುದಿಗೆ ಜೋತಾಡುತ್ತ ರಕ್ಷಣಾ ಚಟುವಟಿಕೆಗಳನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಅವರು `10ಕ್ಕೂ ಅಧಿಕ ಹಿಟಾಜಿ ಇಲ್ಲಿ ಕೆಲಸ ಮಾಡುತ್ತಿದೆ. ರಕ್ಷಣಾ ಕಾರ್ಯಕ್ಕೆ ಇನ್ನೂ ಸಮಯಬೇಕು. ಒಂದೇ ದಿನದಲ್ಲಿ ಆಗುವ ಕೆಲಸ ಇದಲ್ಲ’ ಎಂದರು.
ಮುಖ್ಯಮoತ್ರಿ ಆಗಮನದ ಸಾಧ್ಯತೆ:
`ರಕ್ಷಣಾ ಕಾರ್ಯಾಚರಣೆಯಲ್ಲಿ ಯಾರು ನಿರ್ಲಕ್ಷ ಮಾಡಿಲ್ಲ. ಕೆಲಸ ನಿರಂತವಾಗಿ ನಡೆಯುತ್ತಿದೆ. ಮತ್ತೆ ಮತ್ತೆ ಭೂ ಕುಸಿತ ಉಂಟಾಗಿದ್ದು, ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ. ಶಿರೂರು ಗುಡ್ಡ ಕುಸಿತ ವೀಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಸಾಧ್ಯತೆ ಇದೆ’ ಎಂದು ಮಂಕಾಳು ವೈದ್ಯ ತಿಳಿಸಿದರು.
ಕ್ರೇನ್ ಏರಿ ಗುಡ್ಡ ಪರಿಶೀಲನೆ ನಡೆಸಿದ ಮಂಕಾಳು ವೈದ್ಯ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..
Discussion about this post