ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಗಸ್ಟ 20ರಂದು ಪತ್ರ ಬರೆದಿದ್ದಾರೆ. ಆ ಪತ್ರ ಅಗಸ್ಟ 22ರಂದು ಕಾಗೇರಿ ಅವರ ಕೈ ಸೇರಿದೆ. (Shiruru)
ಶಿರೂರು (Shiruru) ಹಾಗೂ ಉಳುವರೆ ಗ್ರಾಮಕ್ಕೆ ಭೇಟಿ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಭಾಗದ ಸಂತ್ರಸ್ತರಿಗೆ ವಿಶೇಷ ಅನುದಾನ ನೀಡಬೇಕು ಎಂದು ಕೋರಿದ್ದರು. ಜುಲೈ 31ರಂದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದರು. ಅವರ ಮನವಿ ಆಲಿಸಿದ ಪ್ರಧಾನಿ ಅಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದು, ಇದೀಗ ಆ ಪತ್ರಕ್ಕೆ ಪ್ರತಿಯಾಗಿ ಅಧಿಕೃತವಾಗಿ ಇನ್ನೊಂದು ಪತ್ರ ರವಾನಿಸಿದ್ದಾರೆ.
`ಸಂಸದರು ಸಲ್ಲಿಸಿದ ಪತ್ರ ಸ್ವೀಕಾರವಾಗಿದ್ದು, ಭಾರೀ ಪ್ರಮಾಣದ ಮಳೆಯಿಂದ ನೊಂದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಅಡಿ ಪರಿಹಾರ ಒದಗಿಸಲು ಅನುದಾನ ಮಂಜೂರಿಯಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಭರವಸೆ ಹಾಗೂ ಬೆಂಬಲ ನೊಂದ ಕುಟುಂಬಗಳಿಗಿದೆ. ನಾನು ಸಂತ್ರಸ್ತರ ಪರವಾಗಿ ಪ್ರಾರ್ಥಿಸುತ್ತೇನೆ’ ಎಂಬ ಅರ್ಥದಲ್ಲಿ ನರೇಂದ್ರ ಮೋದಿ ಪತ್ರ ರವಾನಿಸಿದ್ದಾರೆ. ಕಚೇರಿ ಕಡತದ ದಾಖಲೆಗಳಿಗಾಗಿ ಅವರು ಪತ್ರ ಬರೆದಿದ್ದು, ಅದನ್ನು ಕಾಯ್ದಿರಿಸಿಕೊಂಡಿದ್ದಾರೆ.
ಆ ಮೂಲಕ ವಿಶೇಷ ಪರಿಹಾರ ಬಿಡುಗಡೆ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ.
S News ಡಿಜಿಟಲ್
Discussion about this post