ಶಿರೂರು (Shiruru) ತಟದ ಗಂಗಾವಳಿ ನದಿ ಆಳದಲ್ಲಿ ಅರ್ಜುನ ಓಡಿಸುತ್ತಿದ್ದ ಲಾರಿ ಪತ್ತೆಯಾಗಿದೆ. ಸತತ ಒಂದು ತಿಂಗಳ ಹುಡುಕಾಟದ ನಂತರ ಲಾರಿ ಇರುವ ಸ್ಥಳ ಗೊತ್ತಾಗಿದೆ.
ಜಿಲ್ಲಾಡಳಿತದ ಅನುಮತಿ ಇಲ್ಲದಿದ್ದರೂ ಕದ್ದುಮುಚ್ಚಿ ನೀರಿಗೆ ಇಳಿದು ಹುಡುಕಾಟ ನಡೆಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಲಾರಿ ಇರುವ ಸ್ಥಳವನ್ನು ಪತ್ತೆ ಮಾಡಿದ್ದಾರೆ. ಲಾರಿ ಮೇಲೆ 10 ಅಡಿ ಮಣ್ಣು ಬಿದ್ದಿದ್ದು, ರಾಡಿಯನ್ನು ಅಗೆಯುತ್ತ ಆಳಕ್ಕೆ ಹೋದ ಅವರು ಲಾರಿಯನ್ನು ಕಂಡು ಹಿಡಿದಿದ್ದಾರೆ. ಲಾರಿಯ ಒಳಗೆ ಚಾಲಕ ಅರ್ಜುನ್ ಶವ ಇರುವ ಸಾಧ್ಯತೆ ಹೆಚ್ಚಿದೆ.
ಇದೀಗ ಈ ವಿಷಯವನ್ನು ಅರ್ಜುನನ ಮನೆಗೆ ತಲುಪಿಸುವುದಕ್ಕಾಗಿ ಅವರು ತಮ್ಮ ಆಂಬುಲೆನ್ಸ್ ಏರಿ ಕೇರಳಕ್ಕೆ ಹೊರಟಿದ್ದಾರೆ. ಈ ಲಾರಿಯನ್ನು ಮೇಲೆತ್ತುವುದು ಸಾಹಸದ ಕೆಲಸವಾಗಿದ್ದು, ಅಲ್ಲಿರುವ ಮಣ್ಣನ್ನು ಪೂರ್ತಿಯಾಗಿ ತೆಗೆದ ನಂತರವೇ ಲಾರಿ ಹೊರಬರಬೇಕಿದೆ. ಶಿರೂರು ಗುಡ್ಡ ಕುಸಿದಾಗ ಅರ್ಜುನನನ್ನು ಕಾಪಾಡುವಂತೆ ಕೇರಳ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿತ್ತು. ಅದರಂತೆ ಈಗ ಲಾರಿ ಪತ್ತೆಯಾಗಿರುವ ಹಿನ್ನಲೆ ಅದನ್ನು ಮೇಲೆತ್ತುವಂತೆ ಜಿಲ್ಲಾಡಳಿತದ ಮೇಲೆ ಕೇರಳ ಸರ್ಕಾರದಿಂದ ಒತ್ತಡ ಬರುವ ಸಾಧ್ಯತೆ ಹೆಚ್ಚಿದೆ.
Discussion about this post