ಶಿವರಾತ್ರಿ ಹಿನ್ನಲೆ ವ್ಯಾಪಾರಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಮಹಮದ್ ರಫಿಕ್ ಸಾವನಪ್ಪಿದ್ದಾರೆ. ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಅವರು ಆರೋಗ್ಯದಲ್ಲಿನ ದಿಡೀರ್ ಏರುಪೇರಿನಿಂದಾಗಿ ಕೊನೆ ಉಸಿರೆಳೆದಿದ್ದಾರೆ.
ಜಾರ್ಖಂಡ ಕೋಡ್ರಮಾ ಊರಿನ ಮಹಮದ್ ರಫಿಕ್ (37) ಹಾಗೂ ಉತ್ತರ ಪ್ರದೇಶದ ಕರೀಂಮುದ್ದಿನ್ ಜೊತೆಯಾಗಿ ವ್ಯಾಪಾರ ಮಾಡಿಕೊಂಡಿದ್ದರು. ಶಿವರಾತ್ರಿ ಹಿನ್ನಲೆ ಅವರಿಬ್ಬರು ಸೇರಿ ಗೋಕರ್ಣದಲ್ಲಿ ಬಟ್ಟೆ ಅಂಗಡಿ ತೆರೆದಿದ್ದರು.
ಫೆ 1ರ ಸಂಜೆ 6.30ರ ಆಸುಪಾಸಿಗೆ ಮಹಮದ್ ರಫಿಕ್ ಆರೋಗ್ಯದಲ್ಲಿ ಏರುಪೇರಾಯಿತು. ಅವರ ಮೂಗಿನಿಂದ ರಕ್ತ ಬರಲು ಶುರುವಾಯಿತು. ಚಿಕಿತ್ಸೆಗೆ ದಾಖಲಿಸುವುದರೊಳಗೆ ಮಹಮದ್ ರಫಿಕ್ ಸಾವನಪ್ಪಿದರು.
ಮಹಮದ್ ರಫಿಕ್ ಜೊತೆಗಾರ ಕರೀಂಮುದ್ದಿನ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ. ಅದಾದ ನಂತರ ಶವಾಗಾರದಿಂದ ಶವ ಪಡೆದಿದ್ದಾರೆ.