ಜೊಯಿಡಾ: ಜೊಯಿಡಾದಿಂದ ಪಿರನೋವಾಡಿ ತೆರಳುವ ರಸ್ತೆಯ ಕೆರೆ ಕಟ್ಟೆ ಮೇಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ರತ್ನಾಕರ ನಾಯ್ಕ ಎಂಬಾತರು ಸಿಕ್ಕಿ ಬಿದ್ದಿದ್ದಾರೆ.
ಕುಂಬಾರವಾಡ ದೇವಳಿಯ ರತ್ನಾಕರ ನಾಯ್ಕ ಅವರಿಗೆ 70 ವರ್ಷ. ಅದಾಗಿಯೂ ಅವರು ಗುಂಡು ಪಾರ್ಟಿ ಆಯೋಜಿಸುವುದನ್ನು ಬಿಟ್ಟಿಲ್ಲ. ಡಿ 21ರಂದು ಕೆರೆ ಏರಿ ಮೇಲೆ 5 ಜನರನ್ನು ಸೇರಿಸಿ ಅವರು ಎಲ್ಲರಿಗೂ ಸರಾಯಿ ಸರಬರಾಜು ಮಾಡುತ್ತಿದ್ದರು.
ಈ ವಿಷಯ ಅರಿತ ಜೊಯಿಡಾ ಪಿಎಸ್ಐ ಮಹಾದೇವಿ ನಾಯ್ಕೊಡಿ ಅಲ್ಲಿ ದಾಳಿ ನಡೆಸಿದರು. ಪೊಲೀಸರ ಆಗಮನ ನೋಡಿ ಉಳಿದವರೆಲ್ಲ ಓಡಿ ಪರಾರಿಯಾದರು. ವಯಸ್ಸಾದ ಕಾರಣ ರತ್ನಾಕರ್ ನಾಯ್ಕರ ಬಳಿ ಓಡಲು ಆಗಲಿಲ್ಲ. ರತ್ನಾಕರ ನಾಯ್ಕ ಪ್ಯಾಂಟಿನ ಕಿಸೆಯಲ್ಲಿ ವಿವಿದ ಮದ್ಯದ ಪ್ಯಾಕೇಟ್’ಗಳು ಸಿಕ್ಕವು.
ಪೊಲೀಸರು ಪ್ರಕರಣ ದಾಖಲಿಸಿಕೊಂಡರು.