ಯಲ್ಲಾಪುರ: ದಾತ್ರಿ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದ ಕಾರಣ ಅಲ್ಲಿನ ನಿವಾಸಿ ಮಂಜುನಾಥ ಹೆಗಡೆ ತಹಶೀಲ್ದಾರ್ ಕಚೇರಿ ಮುಂದೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಒಂದು ವರ್ಷದ ಹಿಂದೆ ಹಿತ್ಲಕಾರಗದ್ದೆ ಬಳಿಯ ದಾತ್ರಿ ನಗರದಲ್ಲಿ ಮಂಜುನಾಥ ಭಟ್ಟ ಅವರು ಸೈಟ್ ಖರೀದಿಸಿದ್ದರು. ಕಳೆದ ವರ್ಷ ಅವರು ಪಟ್ಟಣ ಪಂಚಾಯತಗೆ ನೀರಿನ ಕರವನ್ನು ಸೇರಿ ತೆರಿಗೆ ಪಾವತಿಸಿದ್ದರು. ಈ ವರ್ಷವೂ ಅವರು ತೆರಿಗೆ ಪಾವತಿ ಮಾಡಿದ್ದಾರೆ. ಆದರೆ, ಈವರೆಗೂ ಪಟ್ಟಣ ಪಂಚಾಯತ ಒಂದು ಹನಿ ನೀರನ್ನು ಪೂರೈಸಿಲ್ಲ.
`ದಾಖಲೆಗಳ ಪ್ರಕಾರ ಕುಡಿಯುವ ನೀರು ಪೂರೈಸಿರುವ ಬಗ್ಗೆ ಮಾಹಿತಿಯಿದೆ. ಆದರೆ, ನೀರು ಪೂರೈಕೆ ಆಗುತ್ತಿಲ್ಲ. ನೀರು ಒದಗಿಸುವಂತೆ ಸಾಕಷ್ಟು ಪತ್ರ ಬರೆದರೂ ಪಟ್ಟಣ ಪಂಚಾಯತ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಶನಿವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವೆ’ ಎಂದು ಮಂಜುನಾಥ ಭಟ್ಟ ತಿಳಿಸಿದರು.