ಬಿಪಿ, ಶುಗರ್ ಹಾಗೂ ಹೃದಯ ರೋಗದಿಂದ ತತ್ತರಿಸಿದ್ದ ಶಿರಸಿಯ ಮನೋಹರ ನಾಯ್ಕ ಅಂಕೋಲಾದ ಜೈಹಿಂದ್ ಲಾಡ್ಜಿನಲ್ಲಿ ಸಾವನಪ್ಪಿದ್ದಾರೆ.
55 ವರ್ಷದ ಮನೋಹರ ನಾಯ್ಕ ಶಿರಸಿಯ ಕೆಎಚ್ಬಿ ಕಾಲೋನಿಯ ತಿಮ್ಮಕ್ಕ ಗಾರ್ಡನ್ ಬಳಿ ವಾಸವಾಗಿದ್ದರು. ವಿವಿಧ ವ್ಯವಹಾರಗಳ ಮೂಲಕ ಅವರು ಬದುಕು ಕಂಡುಕೊOಡಿದ್ದರು. ಹಲವು ಬಗೆಯ ರೋಗಗಳಿಂದ ಅವರು ತತ್ತರಿಸಿದ್ದರು. ಈ ನಡುವೆ ಕಾಲಿಗೆ ಗಂಭೀರ ಪ್ರಮಾಣದ ಗಾಯವಾಗಿದ್ದು, ಅದು ಗ್ಯಾಂಗ್ರಿನ್ ಸ್ವರೂಪ ಪಡೆದಿತ್ತು. ಕೆಲ ದಿನಗಳ ಹಿಂದೆ ಅಂಕೋಲಾಗೆ ಬಂದಿದ್ದ ಮನೋಹರ ನಾಯ್ಕ ಅಲ್ಲಿನ ಜೈ ಹಿಂದ್ ಲಾಡ್ಜಿನಲ್ಲಿ ರೂಂ ಪಡೆದಿದ್ದರು.
ಫೆ 18ರಂದು ಲಾಡ್ಜಿನ ಒಳ ಪ್ರವೇಶಿಸಿದ ಅವರು ಹೊರಗೆ ಬರಲಿಲ್ಲ. ಮಲಗಿದ ಸ್ಥಳದಲ್ಲಿಯೇ ಮನೋಹರ ನಾಯ್ಕ ಸಾವನಪ್ಪಿದ್ದರು. ಶವವನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಅಣ್ಣ ಉದಯ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿ ಶವ ಬಿಡಿಸಿಕೊಂಡರು.