ಶಿರಸಿ ಹೊಸ ಬಸ್ ನಿಲ್ದಾಣದಲ್ಲಿದ್ದ ಆದಿತ್ಯ ನಾಯ್ಕ ಎಂಬ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಆದಿತ್ಯ ನಾಯ್ಕ ಅವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ ಅವರ ತಾಯಿ ವಸುಮತಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಕಾನಗೋಡಿನ ವಸುಮತಿ ನಾಯ್ಕ ಅವರು ಟೇಲರಿಂಗ್ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರು. 17 ವರ್ಷದ ಆದಿತ್ಯ ದಿವಾಕರ ನಾಯ್ಕ ಅವರು ಗುರುವಾರ ಶಿರಸಿಗೆ ಬಂದಿದ್ದರು. ಆದರೆ, ನಂತರ ಅವರು ಮನೆಗೆ ಮರಳಲಿಲ್ಲ. ಹೊಸ ಬಸ್ ನಿಲ್ದಾಣದಲ್ಲಿ ಅವರನ್ನು ಕೆಲವರು ಕೊನೆಯದಾಗಿ ನೋಡಿದ್ದಾರೆ.
ಹೊಸ ಬಸ್ ನಿಲ್ದಾಣದಿಂದಲೇ ದುಷ್ಕರ್ಮಿಗಳು ಆದಿತ್ಯ ನಾಯ್ಕ ಅವರನ್ನು ಅಪಹರಿಸಿದ ಅನುಮಾನಗಳಿವೆ. `ದುಷ್ಕಮಿಗಳು ಆದಿತ್ಯ ನಾಯ್ಕರನ್ನು ಫುಸಲಾಯಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ’ ಎಂಬುದು ಅವರ ತಾಯಿ ವಸುಮತಿ ನಾಯ್ಕ ಅವರ ದೂರು.
ಸದ್ಯ ಶಿರಸಿ ಶಹರ ಠಾಣೆಯ ಪೊಲೀಸರು ವಸುಮತಿ ದಿವಾಕರ ನಾಯ್ಕ ಅವರ ದೂರು ಸ್ವೀಕರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆಧಿತ್ಯ ನಾಯ್ಕರಿಗಾಗಿ ಹುಡುಕಾಟ ನಡೆಸಿದ್ದಾರೆ.