ಶಿರಸಿ ಟಿಎಸ್ಎಸ್ ರಸ್ತೆಯ ಕೃಷಿ ಭಾರತಿ ಬಳಿ 2.5 ಗುಂಟೆ ಜಾಗದಲ್ಲಿ ಮಡಿವಾಳ ಸಮಾಜದವರು ಮಾಚಿದೇವ ಸಮುದಾಯ ಭವನ ನಿರ್ಮಿಸಿದ್ದಾರೆ.
ಈ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಮಾಜಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಅವರ ಕೊಡುಗೆಯನ್ನು ನೆನೆದರು.
ಇದರೊಂದಿಗೆ `2008ರಲ್ಲಿ ನಾನು ಕಾಂಗ್ರೆಸ್ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷನಾಗಿದ್ದಾಗ ಮಡಿವಾಳ ಸಮಾಜದ ಕಟ್ಟಡ ನಿರ್ಮಾಣಕ್ಕೆ 50 ಸಾವಿರ ರೂ ದೇಣಿಗೆ ನೀಡಿದ್ದೆ. ಇದೀಗ ಹಲವು ದಾನಿಗಳ ನೆರವಿನಿಂದ ನೂತನ ಕಟ್ಟಡ ನಿರ್ಮಾಣವಾಗಿದೆ’ ಎಂದು ಹೇಳಿದರು.
`ನಿಮ್ಮೆಲ್ಲರ ಸಹಕಾರದಿಂದ ಶಾಸಕನಾಗಿರುವ ನಾನು ಸರ್ಕಾರದಿಂದಲೂ ಮತ್ತಷ್ಟು ಅನುದಾನ ತರುವೆ’ ಎಂದು ಘೋಷಿಸಿದರು. ಜಗದ್ಗುರು ಬಸವ ಮಾಚಿವದೇವ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು.