ಯಲ್ಲಾಪುರ: ಅಲ್ಪಸಂಖ್ಯಾತರ ಸಚಿವ ಜಮೀರ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ಮುಖಂಡ ರಾಮು ನಾಯ್ಕ ವಾಗ್ದಾಳಿ ನಡೆಸಿದ್ದಾರೆ. ಹಿಂದುತ್ವ ಹಾಗೂ ಬಿಜೆಪಿ ಪ್ರಮುಖರನ್ನು ಪದೇ ಪದೇ ನಿಂದಿಸುವ ಜಮೀರ್ ನಡವಳಿಕೆ ಬಗ್ಗೆ ಕಿಡಿಕಾರಿದ್ದಾರೆ.
`ರಾಜಕೀಯ ತೆವಲಿಗಾಗಿ ಹಾಗೂ ಬೇರೆಯವರನ್ನು ಮೆಚ್ಚಿಸಲು ಜಮೀರ್ ಅಸಬಂದ್ಧ ಹೇಳಿಕೆ ನೀಡುತ್ತಿದ್ದು, ತಿರುಗಿಬಿದ್ದವರ ಕಾಲು ಹಿಡಿದ ಉದಾಹರಣೆಗಳಿವೆ. ಜಮೀರ್’ರನ್ನು ಸಚಿವ ಎನ್ನುವ ಬದಲು ಜೋಕರ್ ಎನ್ನುವುದು ಸೂಕ್ತ’ ಎಂದು ರಾಮು ನಾಯ್ಕ ಟೀಕಿಸಿದ್ದಾರೆ.
`ಅಧಿಕಾರದ ಅಮಲು, ಅಲ್ಪಸಂಖ್ಯಾತರ ನಾಯಕ ಎಂಬ ಅಹಂ, ಹಣದ ಮದ ಎಲ್ಲವೂ ಸೇರಿ ಜಮೀರ್ ಈ ರೀತಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತನ್ನ ಶಿಷ್ಯನ ರಕ್ಷಣೆಗೆ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಯೋಮಯ ಸ್ಥಿತಿಗೆ ಇಂಥ ಸಚಿವರೇ ಕಾರಣ’ ಎಂದು ರಾಮು ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
`ಕೆ ಜೆ ಹಳ್ಳಿ, ಡಿ ಜೆ ಹಳ್ಳಿ, ಚಾಮರಾಜನಗರ, ಶಿವಾಜಿನಗರ, ಹುಬ್ಬಳ್ಳಿಯಲ್ಲಿ ಹಿಂದು-ಮುಸ್ಲಿo ಗಲಾಟೆ ಮಾಡಿಸಿದವರ ಮೇಲೆ ಈವರೆಗೂ ಕ್ರಮವಾಗಿಲ್ಲ. ವಕ್ಟ್ ಭೂಮಿ ಹಗರಣದಲ್ಲಿ ರೈತರ ಬದುಕು ಬೀದಿಗೆ ಬಂದರೂ ಯಾವ ಶಾಸಕ-ಸಚಿವರು ಜಮೀರ್ ವಿರುದ್ಧ ಮಾತನಾಡಿಲ್ಲ. ಕುಮಾರಸ್ವಾಮಿ ಸೇರಿ ಹಿರಿಯ ನಾಯಕರ ವಿರುದ್ಧ ಟೀಕಿಸಿದರೂ ಜಮೀರ್ ನಡವಳಿಕೆ ಖಂಡಿಸಿದವರಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.
`ಸಚಿವ ಜಮೀರ್’ರನ್ನು ಸಚಿವ ಸಂಪುಟದಿoದ ವಜಾ ಮಾಡಬೇಕಿತ್ತು. ಆದರೆ, ಸಿದ್ದರಾಮಯ್ಯ ಹಾಗೂ ಜಮೀರರ ನಡುವಿನ ಒಳ ಒಪ್ಪಂದದಿoದ ಸಚಿವರಾಗಿ ಮುಂದುರೆಸಲಾಗಿದೆ’ ಎಂದು ದೂರಿದರು.