ದಾಂಡೇಲಿ: ಪತ್ನಿ ಜೊತೆ ಜಗಳ ಮಾಡಿದ ಲಕನರಾಮ ಕಂಜರಬಾಟ ನೇಣಿಗೆ ಶರಣಾಗಿದ್ದಾರೆ.
ದಾಂಡೇಲಿ ಗಾಂಧಿನಗರದಲ್ಲಿ ವಾಸವಾಗಿದ್ದ ಲಕನರಾಮ ಗುಜುರಿ ವ್ಯಾಪಾರ ಮಾಡಿಕೊಂಡಿದ್ದರು. ಸಣ್ಣ ಪುಟ್ಟ ವಿಷಯಕ್ಕಾಗಿ ಅವರು ಪತ್ನಿ ಜೊತೆ ಮುನಿಸಿಕೊಂಡಿದ್ದರು. ಇದೇ ಕಾರಣದಿಂದ ಅವರ ಪತ್ನಿ ಮೋಹಿನಿ ಕಂಜರಬಾಟ ತವರುಮನೆಗೆ ಹೋಗಿದ್ದರು.
ಇದರಿಂದ ಬೇಸರಗೊಂಡ ಲಕನರಾಮ ಜನವರಿ 3ರಂದು ಮನೆ ಕಿಟಕಿ ಸರಳಿಗೆ ವೇಲು ಸುತ್ತಿಕೊಂಡು ಅದಕ್ಕೆ ಕುತ್ತಿಗೆ ಬಿಗಿದು ನೇತಾಡಿದ್ದಾರೆ. ಸಂಜೆ 4.30ಕ್ಕೆ ಇದನ್ನು ನೋಡಿದ ಅವರ ಅಕ್ಕ ರೂಪಾ ಕಂಜರಬಾಟ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.