ಸೊಂಕು ತಗುಲಿದ ಎರಡು ದಿನದಲ್ಲಿ ನರಕ ಕಾಣಿಸುವ `ಮಾಂಸ-ಭಕ್ಷಕ ಬ್ಯಾಕ್ಟೀರಿಯಾ’ ಜಪಾನ್’ನಲ್ಲಿ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ.
ಜೂನ್ 2ರ ಅಂಕಿ ಅಂಶಗಳ ಪ್ರಕಾರ ಈ ಬಾಕ್ಟೀರಿಯಾ 977 ಜನರಿಗೆ ಹರಡಿದೆ. ಕೋವಿಡ್ ಆತಂಕದಲ್ಲಿರುವ ಜನರಿಗೆ ಇದು ಇನ್ನೊಂದು ಆಘಾತ ತಂದಿದೆ. ಕಳೆದ ವರ್ಷ ಜಪಾನ್’ನಲ್ಲಿ 941 ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಅವು ಕಡಿಮೆಯಾಗಿದ್ದು, ಇದೀಗ ಮತ್ತೆ ಏರಿಕೆ ಹಂತದಲ್ಲಿದೆ.
ಈ ಬ್ಯಾಕ್ಟೀರಿಯಾದಿಂದ ಗಂಟಲಿನಲ್ಲಿ ಊತ ಮತ್ತು ಗಂಟಲು ಕೆರೆತ ಉಂಟಾಗುತ್ತದೆ. ಕೆಲವು ಬ್ಯಾಕ್ಟೀರಿಯಾಗಳು ತೀವ್ರಗತಿಯಲ್ಲಿ ಸೋಂಕಿಗೆ ಕಾರಣವಾಗುತ್ತವೆ. ಕೈ-ಕಾಲು ನೋವು, ಜ್ವರ ಬಂದು ರಕ್ತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ರೋಗಿ ಉಸಿರಾಟ ಸಮಸ್ಯೆ ಹಾಗೂ ಅಂಗಾಗ ವೈಫಲ್ಯಕ್ಕೆ ಒಳಗಾಗಿ ಸಾವನಪ್ಪುತ್ತಾರೆ.
Discussion about this post