ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಇಬ್ಬರೂ ಹೊಸದಾಗಿ ಅಧಿಕಾರ ಸ್ವೀಕರಿಸಿದವರಾಗಿದ್ದು, ಮೊದಲ ವಾರದಲ್ಲಿಯೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ವರ್ಷದ ಮೊದಲೇ ಇಲ್ಲಿ ಬಂದವರಾದರೂ ಈ ಜಿಲ್ಲೆ ಅವರಿಗೆ ಚಿರಪರಿಚಿತವಲ್ಲ. ಹೀಗಾಗಿ ಗುಡ್ಡ ಕುಸಿತ, ನೆರೆ ಪ್ರವಾಹ ಜಿಲ್ಲಾಡಳಿತದ ಮಟ್ಟಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ ಜಿಲ್ಲೆಯಲ್ಲಿ ಕೆಲಸ ಮಾಡಿ ಗೊತ್ತಿದ್ದರಿಂದ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಮ್ಮ ಅನುಭವಗಳನ್ನು ಇಲ್ಲಿ ಪ್ರಯೋಗ ಮಾಡಿದ್ದು, ತಕ್ಕಮಟ್ಟಿಗೆ ಅದು ಯಶಸ್ವಿಯಾಗಿದೆ. ಗುಡ್ಡಗಾಡುಗಳನ್ನು ಹೊಂದಿದ ಈ ಪ್ರದೇಶದಲ್ಲಿ ಅನುಭವ ಇಲ್ಲದ ಬೇರೆ ಯಾವುದೇ ಅಧಿಕಾರಿಗಳು ಬಂದಿದ್ದರೂ ಕೈ ಕಟ್ಟಿ ಕುಳಿತುಕೊಳ್ಳಬೇಕಿತ್ತು. ಒಟ್ಟಾರೆಯಾಗಿ ಶಿರೂರು ಗುಡ್ಡ ಕುಸಿತ ಪ್ರಕರಣ ಹೇಗೆ ನಡೆಯಿತು? ರಕ್ಷಣಾ ಕಾರ್ಯಾಚರಣೆ ಹೇಗಿತ್ತು? ಯಾರು ಯಾರು ಇದಕ್ಕೆ ಸಹಕಾರ ನೀಡಿದರು? ಎಂದು ಇದೀಗ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಮಾತನಾಡಿದ್ದಾರೆ.
ಈ ವಿಡಿಯೋ ಇಲ್ಲಿ ನೋಡಿ..
Discussion about this post