ಶಿರಸಿ: ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಗಿಡಗಳ ನಾಟಿಗೆ ಅರಣ್ಯ ಇಲಾಖೆ ಉದ್ಯೋಗ ಖಾತರಿ ಯೋಜನೆಯ ಮೊರೆ ಹೋಗಿದೆ. ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜೊತೆ ಅರಣ್ಯವನ್ನು ಇನ್ನಷ್ಟು ಸಂಪತ್ಬರಿತವಾಗಿಸುವ ಪ್ರಯತ್ನ ನಡೆದಿದೆ.
ಸೋಮವಾರ ಹುಣಸೆಕೊಪ್ಪ ಮತ್ತು ಯಚಡಿಯಲ್ಲಿ ಗಿಡಗಳನ್ನು ನೆಡಲಾಗಿದ್ದು, ಎಲ್ಲಾ ಊರುಗಳಲ್ಲಿಯೂ ಆಂದೋಲನ ರೀತಿಯಲ್ಲಿ ಗಿಡ ನೆಡುವ ಗುರಿ ಇಲಾಖೆಗಿದೆ. ಗೇರು, ಬಿಲ್ವಪತ್ರೆ, ಲಿಂಬು, ಸಿಲ್ವರ್, ಸಾಗವಾನಿ, ನೇರಳೆ, ಹೊಳೆಮತ್ತಿ, ಕೆಂಡ ಸಂಪಿಗೆ, ಅತ್ತಿ, ಹಲಸು, ಹೊಣಲು, ಕಡಗಲು ಗಿಡಗಳಿಗೆ ಈ ಬಾರಿ ಒತ್ತು ನೀಡಲಾಗಿದೆ. 10 ಸಾವಿರಕ್ಕೂ ಅಧಿಕ ಗಿಡ ಈಗಾಗಲೇ ನೆಟ್ಟಿರುವ ಬಗ್ಗೆ ಸಾಮಾಜಿಕ ಅರಣ್ಯ ವಿಭಾಗದವರು ಹೇಳಿಕೊಂಡಿದ್ದಾರೆ. `ಅರಣ್ಯದಲ್ಲಿ ಗಿಡ ನೆಡುವ ಮೂಲಕ ಹಸಿರು ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಉತ್ತಮ ಪರಿಸರ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆ ಜೊತೆ ಗ್ರಾ ಪಂ ಕೈ ಜೋಡಿಸಿದೆ’ ಎಂದು ಆ ಭಾಗದ ಗ್ರಾ ಪಂ ಅಧಿಕಾರಿ ಕಲ್ಲಪ್ಪ ತಿಳಿಸಿದರು.
Discussion about this post