ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದ್ದು, ಶಿರಸಿಯ ಪ್ರಶಾಂತ ಹುಲೆಕಲ್ ಈ ವರ್ಷವೂ ನೈಜ ಹಾವಿಗೆ ಪೂಜೆ ಮಾಡಿದರು. ಅದಾದ ನಂತರ ಆ ಹಾವನ್ನು ಕಾಡಿಗೆ ಬಿಟ್ಟರು.
ಕಳೆದ ಅನೇಕ ವರ್ಷಗಳಿಂದ ಅವರು ನಾಗರ ಪಂಚಮಿ ದಿನ ನೈಜ ಹಾವಿಗೆ ಪೂಜೆ ಮಾಡುತ್ತ ಬಂದಿದ್ದಾರೆ. ಅವರ ಜೊತೆ ಕುಟುಂಬದವರು ಸಹ ಈ ಪೂಜೆಯಲ್ಲಿ ಧೈರ್ಯದಿಂದ ಭಾಗವಹಿಸುತ್ತಾರೆ. ನಾಗರ ಹಾವಿಗೆ ಹೂ ಎರಚಿ ಹಾಲು ಎರೆದು ಭಕ್ತಿಯಿಂದ ಪೂಜಿಸುತ್ತಾರೆ.
ಈವರೆಗೆ ನಾಡಿಗೆ ಬಂದ ಸಾವಿರಕ್ಕೂ ಅಧಿಕ ಹಾವುಗಳನ್ನು ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Discussion about this post