ಶಿರಸಿಯ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತ ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ.
ಅದಾಗಿಯೂ ಪಟ್ಟು ಬಿಡದೇ ಕಾರ್ಯಾಚರಣೆ ಮುಂದುವರೆಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡಿ ಬಿಟ್ಟಿದ್ದು, ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಿದ್ದಾರೆ. ಯಾವುದೇ ಜೀವ ಹಾನಿ ಆಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಈ ಮಾರ್ಗದಲ್ಲಿ ಓಡಾಡುವ ವಾಹನಗಳನ್ನು ತಡೆ ಹಿಡಿಯಲಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಹಿಟಾಚಿ ಹಾಗೂ ಟಿಪ್ಪರ್’ಗಳನ್ನು ಬಳಸಿ ಮಣ್ಣು ತೆಗೆಯಲಾಗುತ್ತಿದೆ. ನಿರಂತರವಾಗಿ ಕಾರ್ಯಾಚರಣೆ ಮುಂದುವರೆದಿದ್ದು, ತೆಗೆದ ಪ್ರಮಾಣದಲ್ಲಿಯೇ ಮಣ್ಣು ಮತ್ತೆ ಕುಸಿಯುತ್ತಿದೆ. ಆದರೂ, ಜನರ ಓಡಾಟಕ್ಕೆ ಅನುಕೂಲವಾಗುವಂತೆ ಮಣ್ಣನ್ನು ಬೇರೆ ಕಡೆ ಸಾಗಿಸುವ ಪ್ರಯತ್ನ ಮುಂದುವರೆದಿದೆ.
ಈ ಕುರಿತು ಪತ್ರಕರ್ತ ಸುಧನ್ವ ಖರೆ ಪ್ರತ್ಯಕ್ಷ ವರದಿ ನೀಡಿದ್ದು, ಅದರ ವಿಡಿಯೋ ಇಲ್ಲಿ ನೋಡಿ..
Discussion about this post