ಯಲ್ಲಾಪುರ: ಕಿರವತ್ತಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆಗೆ ಎಲ್ಲಾ ಬಗೆಯ ತಯಾರಿ ನಡೆಯುತ್ತಿದೆ. ಡಿಸೆಂಬರ್ 16 ಹಾಗೂ 17ರಂದು ರಾಜ್ಯ ದನಗರ ಗೌಳಿ ಪ್ರೋ ಕಬಡ್ಡಿ ನಡೆಸಲು ನಿರ್ಧರಿಸಲಾಗಿದೆ.
ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಾಳುಗಳು ಕಬ್ಬಡಿ ಆಡಲು ಆಗಮಿಸಲಿದ್ದಾರೆ. ಈಗಾಗಲೇ ಸ್ಪರ್ಧಾಳುಗಳ ಆಯ್ಕೆ ಪ್ರಕ್ರಿಯೆ, ನೊಂದಣಿ ಕೆಲಸ ಮುಕ್ತಾಯವಾಗಿದೆ. ಕಿರವತ್ತಿ ಸರ್ಕಾರಿ ಪ್ರೌಢಶಾಲೆ ಅಂಗಳದಲ್ಲಿ ಕಬ್ಬಡ್ಡಿ ಆಟಕ್ಕಾಗಿ ತಯಾರಿ ನಡೆಸಲಾಗುತ್ತಿದೆ.
ಡಿ 16ರಂದು ಸಂಜೆ 4ಗಂಟೆಯಿoದ ಕಬ್ಬಡಿ ಆಟ ಶುರುವಾಗಲಿದೆ. ಡಿ 17ರ ರಾತ್ರಿ ಈ ಸ್ಪರ್ಧೆಯಲ್ಲಿ ಗೆದ್ದವರು ಯಾರು? ಎಂದು ಗೊತ್ತಾಗಲಿದೆ. 10 ಸಾವಿರಕ್ಕೂ ಅಧಿಕ ಜನರಿಗೆ ಸಾಕ್ಷಿಯಾಗಿ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು, ಕ್ರೀಡಾಸ್ಪರ್ಧಿಗಳಿಗೆ ಉತ್ತೇಜನ, ಸಮುದಾಯ ಸಂಘಟನೆ ಉದ್ದೇಶದಿಂದ ದನಗರ ಗೌಳಿ ಸಮುದಾಯದವರು ಈ ಸ್ಪರ್ಧೆ ಆಯೋಜಿಸಿದ್ದಾರೆ.
ಈ ಹಿನ್ನಲೆ ಶಿವಮೊಗ್ಗ, ಉಡುಪಿ, ದಾವಣಗೆರೆ, ಚಿಕ್ಕಮಂಗಳೂರು, ಉತ್ತರ ಕನ್ನಡ, ಧಾರವಾಡ, ಭದ್ರಾವತಿ, ಬೆಳಗಾವಿ ಭಾಗದ ಕ್ರೀಡಾಪಟುಗಳು ಕಬ್ಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿ 10 ತಂಡದವರು ಭಾಗವಹಿಸಲಿದ್ದಾರೆ.