6

ಅರ್ಹತೆಗೆ ತಕ್ಕ ಉದ್ಯೋಗ: ಕನಸಿನ ಕೆಲಸ ಹುಡುಕಲು ಇಲ್ಲಿದೆ ನೂರು ಅವಕಾಶ!

ಯಲ್ಲಾಪುರ: ಕ್ರಿಯೇಟಿವ್ ಕಂಪ್ಯೂಟರ್ ಇನ್ಸಿಟ್ಯೂಟ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಅಕ್ಟೊಬರ್ 15ರಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಶಾಸಕ ಶಿವರಾಮ ಹೆಬ್ಬಾರ ಮಾರ್ಗದರ್ಶನದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಅವರು ಸಹ ಭಾಗಿಯಾಗಲಿದ್ದಾರೆ. ಬೆಳಗ್ಗೆ 9ಗಂಟೆಗೆ ವಿವಿಧ ಕಂಪನಿಗಳು ಆಗಮಿಸಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದು, ಉದ್ಯೋಗ ದಲ್ಲಿರುವವರೆಲ್ಲರೂ ಬೇಕಾದರೂ ಭಾಗವಹಿಸಬಹುದು!

ಜರ್ಮನಿಯ ಬಾಶ್ ಕಂಪನಿ ಸೇರಿ 20ಕ್ಕೂ ಅಧಿಕ ಕಂಪನಿಯವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಸ್ಥಳದಲ್ಲಿಯೇ ನೇಮಕಾತಿ ಪತ್ರ ಸಿಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿನ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೂ ಸಂದರ್ಶನಕ್ಕೆ ಈ ವೇದಿಕೆ ನೆರವಾಗಲಿದೆ. 7ನೇ ತರಗತಿ ಮೇಲ್ಪಟ್ಟು ಯಾರು ಬೇಕಾದರೂ ಈ ಮೇಳದಲ್ಲಿ ಭಾಗವಹಿಸಬಹುದು.

ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಎ, ಬಿ.ಕಾಂ, ಬಿಬಿಎ, ಬಿಸಿಎ, ಬಿಎಸ್‌ಸಿ, ಎಂ.ಎಸ್ಸಿ, ಎಂ.ಕಾo, ಎಮ್‌ಬಿಎ, ಬಿಎಸ್‌ಡಬ್ಲ್ಯೂ, ಎಮ್‌ಎಸ್‌ಡಬ್ಲ್ಯೂ, ಡಿ.ಎಡ್, ಬಿ.ಎಡ್, ಎಮ್‌ಸಿಎ, ಎಮ್.ಎಸ್.ಸಿ ಓದಿದವರಿಗೆ ಸಾಕಷ್ಟು ಅವಕಾಶಗಳಿವೆ. ವಿಶೇಷವಾಗಿ ವಿಕಲಚೇತನ ಅಭ್ಯರ್ಥಿಗಳಿಗೂ ಉದ್ಯೋಗ ನೀಡುವ ಕನಸು ಕ್ರಿಯೇಟಿವ್ ಕಂಪ್ಯೂಟರ್ ಇನ್ಸಿಟ್ಯೂಟ್ ಅವರದ್ದಾಗಿದೆ. ಸಂದರ್ಶನಕ್ಕೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ಸ್ವ ವಿವರ ಹಾಗೂ ಆಧಾರ್, ಪಾನ್ ದಾಖಲೆ ತರಬೇಕು. ಎಲ್ಲಾ ಪ್ರಮಾಣ ಪತ್ರಗಳನ್ನು ಜೊತೆಗೆ ತರುವುದು ಉತ್ತಮ.

ಸ್ಕಾನ್ ಮಾಡಿ.. ಹೆಸರು ನೊಂದಾಯಿಸಿ!

ನೀವು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತರಾ? ಹಾಗಾದರೆ, ಕ್ಯೂ ಆರ್ ಕೋಡ್ ಸ್ಕಾನ್ ಮಾಡಿ, ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ.

ಲಿಂಕ್ ಬಳಸಿಯೂ ಹೆಸರು ನೊಂದಾಯಿಸಿ:

ಕ್ಯೂ ಆರ್ ಕೋಡ್ ಮೂಲಕ ನೊಂದಣಿ ಗೊತ್ತಾಗುತ್ತಿಲ್ಲವಾ? ಹಾಗಾದರೆ `ಉದ್ಯೋಗ ಮೇಳ ನೊಂದಣಿ’ ಅಕ್ಷರಗಳ ಮೇಲೆ ಕ್ಲಿಕ್ ಮಾಡಿ, ಅರ್ಜಿ ತುಂಬಿ ಹೆಸರು ನೊಂದಾಯಿಸಿ: `ಉದ್ಯೋಗ ಮೇಳ ನೊಂದಣಿ’

ಈ ವಿಷಯವಾಗಿ ಗೊಂದಲಗಳಿದ್ದರೆ ಇಲ್ಲಿ ಕರೆ ಮಾಡಿ: 9986716721, 9611164788, 8722420928

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page