6

ಓದಿನಲ್ಲಿಯೂ ಮುಂದೆ.. ಓಟದಲ್ಲಿಯೂ ಮುಂದೆ.. ಮಾತಿನಲ್ಲಿಯೂ ಮುಂದೆ ಈ ವಿದ್ಯಾರ್ಥಿನಿ!

ಯಲ್ಲಾಪುರ: ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಶ್ವದರ್ಶನ ಬಿ.ಇಡಿ ಕಾಲೇಜು ವಿದ್ಯಾರ್ಥಿನಿ ಹೇಮಾ ಗೌಡ ಗಮನಾರ್ಹ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್’ನ ಪ್ರಶಿಕ್ಷಣ ಭಾರತಿ ಈ ಅಕ್ಟೊಬರ್ 19ರಂದು ಭಾಷಣ ಸ್ಪರ್ಧೆ ಆಯೋಜಿಸಿತ್ತು. ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಅದರಲ್ಲಿ ಬಿ.ಇಡಿ ಅಂತಿಮ ವರ್ಷದಲ್ಲಿ ಓದುತ್ತಿರುವ ಹೇಮಾ ಗೌಡ ಸಹ ಭಾಗವಹಿಸಿದ್ದರು. ರಾಷ್ಟಪ್ರೇಮದ ಕುರಿತು ಭಾಷಣ ಮಾಡಿದ ಅವರು ನಿರ್ಣಾಯಕರ ಗಮನ ಸೆಳೆದರು. ಆ ಮೂಲಕ ಮೂರನೇ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಸಿದ್ದಾಪುರ ಮೂಲಕ ಹೇಮಾ ಗೌಡ ಅವರು ಓದಿನಲ್ಲಿಯೂ ಮುಂದಿದ್ದಾರೆ. ಓಟ ಸೇರಿ ಇನ್ನಿತರ ಕ್ರೀಡಾ ಚಟುವಟಿಕೆಗಳಲ್ಲಿ ಸಹ ಸಾಧನೆ ಮಾಡಿದ್ದಾರೆ. ಪ್ರಸ್ತುತ ಭಾಷಣ ಸ್ಪರ್ಧೆಯಲ್ಲಿ ಸಹ ಬಹುಮಾನ ಪಡೆದು ಮಾತುಗಾರಿಕೆಯಲ್ಲಿಯೂ ಜಾಣ್ಮೆ ಮೆರೆದಿದ್ದಾರೆ.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page