6

ಹುಲ್ಲು ತರಲು ಹೋದವನಿಗೆ ವಿದ್ಯುತ್ ಸ್ಪರ್ಶ: ಸಾವಿನ ನಂತರ ಸಾಕ್ಷಿ ನಾಶ!

ಹಳಿಯಾಳ: ಹೊಲಕ್ಕೆ ಅಳವಡಿಸಿದ ವಿದ್ಯುತ್ ಸ್ಪರ್ಶಿಸಿ ರೈತ ಸಾವನಪ್ಪಿದ್ದು, ಅಕ್ರಮವಾಗಿ ವಿದ್ಯುತ್ ಅಳವಡಿಸಿದವ ಶವವನ್ನು ಬೇರೆಯವರ ಹೊಲಕ್ಕೆ ಎಸೆದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಹಳಿಯಾಳ ಶಿವಪುರದ ಮಂಜುನಾಥ ಕಿರೆಸೂರು (42) ಅವರು ಡಿಸೆಂಬರ್ 6ರಂದು ಶಿವಪುರದ ನಿಂಗಪ್ಪ ಮೇಟಿ ಅವರ ಗೊಂಜಾಳ ಹೊಲಕ್ಕೆ ಹುಲ್ಲು ತರಲು ಹೋಗಿದ್ದರು. ಅಲ್ಲಿ ಕಲಘಟಗಿಯ ಕೆಂದಾರಪ್ಪ ಮೇಟಿ ವಿದ್ಯುತ್ ತಂತಿ ಎಳೆದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದರು.

ಇದನ್ನು ಗಮನಿಸದೇ ಹೊಲಕ್ಕೆ ಹೋದ ಮಂಜುನಾಥ ಅವರ ಕಾಲಿಗೆ ವಿದ್ಯುತ್ ಸ್ಪರ್ಶಿಸಿದೆ. ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಮಂಜುನಾಥ ಅವರ ಸಾವು ಅರಿತ ಕೆಂದಾರಪ್ಪ ಸಾಕ್ಷಿ ನಾಶ ಮಾಡುವುದಕ್ಕಾಗಿ ಅವರ ಶವವನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ.

ಅಬ್ದುಲ್ ಸಾಬ್ ಹೊಲದಲ್ಲಿ ಮಂಜುನಾಥ ಅವರ ಶವ ಎಸೆದು ಪರಾರಿಯಾದ ಕೆಂದಾರಪ್ಪ ವಿರುದ್ಧ ಮಂಜುನಾಥ ಅವರ ಪತ್ನಿ ಸುನಿತಾ ಕಿರೆಸೂರು ಪೊಲೀಸ್ ದೂರು ನೀಡಿದ್ದಾರೆ.

 

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page