6

ನೀವು ಕುಡಿಯುವ ನೀರು ಸೇವನೆಗೆ ಯೋಗ್ಯವೇ? ಗುಣಮಟ್ಟ ಅಳೆಯುವಿಕೆ ಇದೀಗ ಸಂಪೂರ್ಣ ಉಚಿತ!

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಿಗೆ ಪರೀಕ್ಷಾ ಕಿಟ್ ವಿತರಿಸಲಾಗಿದೆ. ಸಾರ್ವಜನಿಕರು ಸಹ ತಾವು ಸೇವಿಸುವ ಕುಡಿಯುವ ನೀರಿನ ಗುಣಮಟ್ಟವನ್ನು ಗ್ರಾಮ ಪಂಚಾಯತ ಮೂಲಕ ಪರಿಕ್ಷಿಸಬಹುದು. ಈ ಸೇವೆ ಸಂಪೂರ್ಣ ಉಚಿತ!

`ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿ ಕಡ್ಡಾಯವಾಗಿ ನಿರಂತರವಾಗಿ ಎಫ್.ಟಿ.ಕೆ ಟೆಸ್ಟ್ ಮಾಡಬೇಕು’ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕ್ರಮ ಕೈಗೊಳ್ಳಬೇಕು’ ಎಂದವರು ಹೇಳಿದ್ದಾರೆ.

ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ ಸಿಬ್ಬಂದಿ ಇದೀಗ ಶಾಲೆ, ಅಂಗನವಾಡಿ, ಸಾರ್ವಜನಿಕ ಬಾವಿ ಹಾಗೂ ನೀರು ಸರಬರಾಜು ಘಟಕದಿಂದ ನೀರಿನ ಮಾದರಿ ಸಂಗ್ರಹಿಸುತ್ತಿದ್ದಾರೆ. ನೀರಿನ ಗುಣಮಟ್ಟ ಕಾಯ್ದುಕೊಳ್ಳುವ ಹಾಗೂ ತಪಾಸಣೆಗಾಗಿ ಗ್ರಾ ಪಂ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತಪಾಸಣಾ ಸಲಕರಣೆಗಳನ್ನು ಸಹ ಸರ್ಕಾರ ಪೂರೈಸಿದೆ. ವಿವಿಧ ಪ್ರದೇಶದ ನೀರು ತಪಾಸಣೆ ನಡೆಸಿ ಅದರ ವರದಿಯನ್ನು ಆನ್‌ಲೈನ್ ಮೂಲಕ ಅಪ್ಡೇಟ್ ಮಾಡುವ ಹೊಣೆಯನ್ನು ಸರ್ಕಾರ ಗ್ರಾಮ ಪಂಚಾಯತಗೆವಹಿಸಿದೆ. ಹೀಗಾಗಿ ನೀರಿನ ಮಾದರಿಗಳ ತಪಾಸಣಾ ಕೆಲಸ ವೇಗವಾಗಿ ನಡೆಯುತ್ತಿದೆ.

ನಾವು-ನೀವು ಸಹ ಬಳಸುತ್ತಿರುವ ನೀರಿನ ಮಾದರಿಯನ್ನು ಗ್ರಾಮ ಪಂಚಾಯತ ಕಚೇರಿಗೆ ನೀಡಿ ಅದರ ಗುಣಮಟ್ಟ ಪ್ರಮಾಣ ಪತ್ರ ಪಡೆಯಬಹುದು. 1 ಲೀಟರ್ ನೀರನ್ನು ಗ್ರಾಮ ಪಂಚಾಯತಗೆ ಒದಗಿಸಿದರೆ ಅದರಲ್ಲಿರುವ ಪಿಚ್, ಆಲ್ಕಲಿನಿಟಿ, ಗಡಸುತನ, ಕ್ಲೋರೈಡ್, ಪ್ಲೋರೈಡ್, ನೈಟ್ರೇಟ್, ಐರನ್, ರೆಸಿಡ್ಯುಯಲ್ ಕ್ಲೋರೀನ್ ಹಾಗೂ ಪ್ರಕ್ಷಬ್ದತೆಯ ವರದಿಯನ್ನು ಒದಗಿಸಲಾಗುತ್ತದೆ. ತರಬೇತಿ ಪಡೆದ ಗ್ರಾ ಪಂ ಸಿಬ್ಬಂದಿಗೆ ಒಂದು ಮಾದರಿಯ ನೀರಿನ ತಪಾಸಣೆ ನಡೆಸಿ ವರದಿ ನೀಡಲು 30 ನಿಮಿಷ ಸಾಕು. ಅದಾಗಿಯೂ ತಾಳ್ಮೆಯಿಂದ ಕಾಯುವುದು ಉತ್ತಮ. ನೀರಿನ ಗುಣಮಟ್ಟ ಕಡಿಮೆಯಿರುವಿಕೆ, ಕುಡಿಯಲು ಯೋಗ್ಯವಾಗಿರುವ ಬಗ್ಗೆ ವರದಿ ಬಂದರೆ ಕುಡಿಯುವ ನೀರಿನ ಗುಣಮಟ್ಟ ಕಾಪಾಡಿಕೊಳ್ಳಲು ಪೂರಕ ಕ್ರಮಗಳನ್ನು ಅಳವಡಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page