6

ನುಡಿಜೇನು ಸಂಪಾದಕರಿಗೆ ಮಾಧ್ಯಮ ಪ್ರಶಸ್ತಿ: ಸಂತಸ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ದಿನ ಪತ್ರಿಕೆ `ನುಡಿಜೇನು’ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಸಂದೀಪ ಸಾಗರ ಅವರು `ನ್ಯೂಸ್ ಫಸ್ಟ್’ ವಾಹಿನಿಯ ಜಿಲ್ಲಾ ವರದಿಗಾರರು ಆಗಿದ್ದಾರೆ. ಕಳೆದ 18 ವರ್ಷದಿಂದ ಅವರು ಪತ್ರಿಕಾ ರಂಗದಲ್ಲಿದ್ದಾರೆ.

ಸoದೀಪ್ ಸಾಗರ ಅವರು ಶಿವಮೊಗ್ಗ ಜಿಲ್ಲೆಯವರು. 2012ರಲ್ಲಿ `ಟಿವಿ 9′ ವರದಿಗಾರರಾಗಿ ಜಿಲ್ಲೆ ಪ್ರವೇಶಿಸಿದ ಅವರು 2020ಕ್ಕೆ `ನ್ಯೂಸ್ ಫಸ್ಟ್’ ಸೇರಿದರು. ವಾರ ಪತ್ರಿಕೆಯಾಗಿದ್ದ `ನುಡಿಜೇನು’ನ್ನು ಅವರು 2019ರಲ್ಲಿ ದಿನ ಪತ್ರಿಕೆಯಾಗಿ ಬದಲಿಸಿದರು. ಸಂದೀಪ ಸಾಗರ ಅವರ ಪತ್ನಿ ಲಾವಣ್ಯ ಸಾಗರ ಅವರು ನುಡಿಜೇನು ಪತ್ರಿಕೆಯ ಒಡೆತನ ಹೊಂದಿದ್ದಾರೆ.

ಸoದೀಪ ಸಾಗರ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿರುವುದಕ್ಕೆ ಅನೇಕರು ಶುಭಾಶಯ ಕೋರಿದರು. ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದವರು ಅವರನ್ನು ಅಭಿನಂದಿಸಿದರು. `ಗಡಿಭಾಗದಲ್ಲಿ ಕನ್ನಡ ಪಸರಿಸುವ ಕಾರ್ಯದಲ್ಲಿ ನುಡಿಜೇನು ಪತ್ರಿಕೆ ಶ್ರಮಿಸುತ್ತಿದೆ. ಈ ಕಾರ್ಯದಲ್ಲಿ ಮಗ್ನರಾದ ಸಂದೀಪ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಯೋಗ್ಯ ವ್ಯಕ್ತಿಗೆ ಸಂದ ಗೌರವ’ ಎಂದು ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಸಂತಸ ಹಂಚಿಕೊoಡರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page