6

ಮಾದಕ ವ್ಯಸನ ಮಾರಾಟ: ಮಹಿಳೆಯರಿಬ್ಬರ ಸೆರೆ!

ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಮಾದಕ ವಸ್ತು ಸಾಗಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಆ ಮಾದಕ ವಸ್ತುವನ್ನು ಖರೀದಿಸಲು ಬಂದಿದ್ದ ಇನ್ನೊಬ್ಬ ಮಹಿಳೆ ಸಹ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಹುಬ್ಬಳ್ಳಿಯ ಅಯೋಧ್ಯನಗರದ ನಾಸಿಮಾಬಾನು (45) ಎಂಬಾತರು 1.84 ಕೆಜಿ ಗಾಂಜಾವನ್ನು ಯಲ್ಲಾಪುರಕ್ಕೆ ತಂದಿದ್ದರು. ಯಲ್ಲಾಪುರ ಅಂಬೇಡ್ಕರ ನಗರದ ಆಯಿಷಾ ಅಬ್ದುಲ್ ಮನಾಫ್ ಗಾಜನೂರು (36) ಇದನ್ನು ಖರೀದಿಸಿದ್ದರು. ಆ ಗಾಂಜಾವನ್ನು ಬೇರೆಯವರಿಗೆ ಮಾರಾಟ ಮಾಡಿ, ಹೆಚ್ಚಿನ ಹಣಗಳಿಸಲು ಆಯಿಷಾ ನಿರ್ಧರಿಸಿದ್ದರು.

ಈ ವಿಷಯ ಅರಿತ ಪೊಲೀಸರು ತಳ್ಳಿಗೇರಿ ಕ್ರಾಸಿನ ಬಳಿ ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದರು. ಗಾಂಜಾ ಮಾರಾಟದಿಂದ ಸಂಗ್ರಹಿಸಿದ 2500ರೂ ಹಣ ಹಾಗೂ ಸ್ಕೂಟಿಯೊಂದನ್ನು ಪೊಲೀಸರು ವಶಕ್ಕೆ ಪಡೆದರು.

ಪಿಎಸ್‌ಐ ಸಿದ್ದಪ್ಪ ಗುಡಿ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಿಎಸ್‌ಐ ಮಾಹಾವೀರ ಕಾಂಬಳೆ, ಪೊಲೀಸ್ ಸಿಬ್ಬಂದಿ ಮಹಮದ್ ಶಫಿ, ಉಮೇಶ ತಂಬರಗಿ, ಗಿರೀಶ ಲಮಾಣಿ, ಮುತ್ತಣ್ಣ, ಚನ್ನಕೇಶವ, ಗಂಗಾರಾಮ, ರೇಣುಕಾ ಬೆಳಗಟ್ಟಿ, ದೀಪಾ ಪೈ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page