6

ಕಾರವಾರ | ಪ್ರವೇಶ ದ್ವಾರಕ್ಕೆ ಅಂಬಿಗ ಚೌಡಯ್ಯರ ಹೆಸರು!

ಕಾರವಾರದ ಸೆಂಟ್ ಮೈಕಲ್ ಶಾಲೆ ಎದುರಿನ ವೃತ್ತಕ್ಕೆ `ನಿಜಶರಣ ಅಂಬಿಗರ ಚೌಡಯ್ಯ ವೃತ್ತ’ ಎಂದು ಹೆಸರಿಡಲು ಬಗ್ಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪ್ರಯತ್ನ ನಡೆಸಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಭೇಟಿ ಮಾಡಿದ ಗಣಪತಿ ಉಳ್ವೇಕರ್ ಅವರು ಈ ಹಿಂದೆ ನಗರಸಭೆ ಬರೆದ ಪತ್ರವನ್ನು ಪ್ರದರ್ಶಿಸಿದರು. `ಈಗಾಗಲೇ ಕಾರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತ ಎಂಬ ಹೆಸರಿಡಲು ಠರಾವು ಮಾಡಲಾಗಿದೆ. ಠರಾವಿನ ಪ್ರತಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ’ ಎಂದವರು ವಿವರಿಸಿದರು.

`ಈ ಹಿನ್ನಲೆ ಕಾರವಾರ ಸೇಂಟ್ ಮೈಕಲ್ ಶಾಲೆಯ ಎದುರು ಇರುವ ವೃತ್ತಕ್ಕೆ ನಿಜಶರಣ ಅಂಬಿಗರ ಚೌಡಯ್ಯ ವೃತ್ತ ಎಂದು ನಾಮಕರಣ ಮಾಡಲು ಆದೇಶಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಟ್ಟಿ ಅವರು `ವೃತ್ತಕ್ಕೆ ಹೆಸರಿಡಲು ಯಾವುದೇ ಅಭ್ಯಂತರವಿಲ್ಲ. ಈ ಬಗ್ಗೆ ತುರ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಿದರು. ಆದರೆ, `ಇಲ್ಲಿ ಯಾವುದೇ ಪ್ರತಿಮೆ ಸ್ಥಾಪನೆಗೆ ಅವಕಾಶ ಇಲ್ಲ’ ಎಂದು ಸ್ಪಷ್ಠಪಡಿಸಿದರು.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page