6

ಸರ್ಕಾರಿ ಯೋಜನೆಗೆ ಸಾವಿರ ಮರ ಬಲಿ!

ಕೆನರಾ ಸರ್ಕಲ್’ನಲ್ಲಿ ಮರಗಳ ಬುಡ ಬಿಟ್ಟು ಶಿರ ಮಾತ್ರ ಕಡಿದರೆ ಅದು ಅಪರಾಧವೇ ಅಲ್ಲ!
ಮುಂಡಗೋಡಿನ ಏತ ನೀರಾವರಿ ಯೋಜನೆಗೆ ಸಂಬoಧಿಸಿ ವಿದ್ಯುತ್ ಒಯ್ಯಲು ಮರಗಳ ಶಿರ ಕಡಿಯಲಾಗಿದೆ. ಶಿರಸಿ-ಯಲ್ಲಾಪುರ-ಉಮ್ಮಚ್ಗಿ-ಕಾತೂರು ಮಾರ್ಗವಾಗಿ ರಸ್ತೆ ಪಕ್ಕದಲ್ಲಿ ಮರಗಳ ಮಾರಣಹೋಮ ನಡೆದಿದ್ದು, ಮರಕ್ಕೆ ಇರುವ ಕೊಂಚ ಎಲೆಬಿಟ್ಟು ಮೇಲ್ಬಾಗವನ್ನು ತುಂಡರಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿಯನ್ನು ನೀಡಿಲ್ಲ. ಮರ ಕಡಿದವರ ವಿರುದ್ಧ ಕ್ರಮವನ್ನು ಜರುಗಿಸಿಲ್ಲ.
ಇನ್ನೂ ವಿಶೇಷ ಎಂದರೆ ಕಟಾವಿಗೆ ಒಳಗಾದ ಮರದ ನಾಟ ಎಲ್ಲಿ ಹೋಯಿತು? ಎಂಬುದು ಯಾರಿಗೂ ಗೊತ್ತಿಲ್ಲ. ಕದ್ದು ಸಾಗಿಸಿದವರು ಸಹ `ತಮಗೆನು ಗೊತ್ತಿಲ್ಲ’ ಎಂಬoತೆ ಮೌನವಾಗಿದ್ದು, ಅಕ್ರಮ ನಡೆದರೂ ಕ್ರಮ ಕೈಗೊಳ್ಳದ ಅಧಿಕಾರಿಗಳತ್ತ ಹೋರಾಟಗಾರರು ಬೊಟ್ಟು ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕೃಷಿಕರು ತೋಟಕ್ಕೆ ಸೊಪ್ಪು ಹಾಕಲು ಸೊಪ್ಪಿನ ಬೆಟ್ಟದಲ್ಲಿರುವ ಮರದ ಸೊಪ್ಪು ಬೋಳಿಸಿದರೂ ಮನೆ ಬಾಗಿಲಿಗೆ ಅಧಿಕಾರಿಗಳು ಬರುತ್ತಾರೆ. ಆದರೆ, ಇಲ್ಲಿ ಮರದ ಬುಡ ಬಿಟ್ಟು ಸಂಪೂರ್ಣ ನಾಟಾ ಕದ್ದರೂ ಅರಣ್ಯಾಧಿಕಾರಿಗಳು ಪ್ರಶ್ನಿಸಿಲ್ಲ.  ಹೀಗಾಗಿ `ಮರದ ಬುಡ ಬಿಟ್ಟು ಶಿರಭಾಗ ಕತ್ತರಿಸಿದರೆ ಅದು ಅಪರಾಧ ಅಲ್ಲ’ ಎಂದು ಜನ ವ್ಯಂಗ್ಯವಾಡುತ್ತಿದ್ದಾರೆ.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page