6

ಹಲಸಿನ ಖಾದ್ಯ ಸವಿಯಲು ಇಲ್ಲಿ ಬನ್ನಿ!

ಹಲಸಿನ ಹಣ್ಣಿನ ಮೌಲ್ಯವರ್ಧನೆಗಾಗಿ ಶಿರಸಿಯಲ್ಲಿ ಪ್ರತಿ ವರ್ಷ ಹಲಸಿನ ಮೇಳ ನಡೆಯುತ್ತದೆ.
ಈ ಬಾರಿ ಜೂ 29 ಹಾಗೂ 30ರಂದು ಹಲಸು ಮತ್ತು ಮಲೆನಾಡು ಮೇಳವನ್ನು ಎ.ಪಿ.ಎಮ್.ಸಿಯ ಸಾವಯವ ಒಕ್ಕೂಟದ ಕಛೇರಿಯ ಆಯೋಜಿಸಲಾಗಿದೆ. ಈ ಮೇಳದಲ್ಲಿ ಹಲಸಿನ ಮತ್ತು ಹಲಸಿನ ಬೀಜದ ವಿಶೇಷ ಖಾದ್ಯ ಸ್ಪರ್ಧೆ ನಡೆಯಲಿದ್ದು, ಆಸಕ್ತ ಮಹಿಳೆಯರು ಭಾಗವಹಿಸಬಹುದು. ಹಲಸಿನ ಸಾಂಪ್ರದಾಯಿಕ ವಿವಿಧ ಖಾದ್ಯಗಳ ಕ್ಯಾಂಟೀನ್ ಇರಲಿದ್ದು ರುಚಿಕರ ತಿಂಡಿ ತಿನಿಸುಗಳು ಮಾರಾಟಕ್ಕೆ ಲಭ್ಯವಿರಲಿದೆ. ವಿವಿಧ ತಳಿಯ ಹಲಸಿನ ಸಸಿಗಳ ಪ್ರದರ್ಶನ ಮತ್ತು ಮಾರಾಟವನ್ನೂ ಆಯೋಜಿಸಲಾಗಿದ್ದು,  ಕೈ ತೋಟದಲ್ಲಿ ಬೆಳೆಸಿದ ನಾಟಿ ತರಕಾರಿ ಬೀಜಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಸೋಲಾರ್ ಆಧಾರಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಇನ್ನೊಂದು ವಿಶೇಷ. ಹಲಸಿನ ಮೌಲ್ಯವರ್ಧಿತ ಆಹಾರ ಉತ್ಪನ್ನ ತಯಾರಿಸುತ್ತಿರುವ ಜಿಲ್ಲೆಯ ಸ್ವಸಹಾಯ ಸಂಘ ಹಾಗೂ ಉದ್ದಿಮೆದಾರರು, ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ವಿಚಾರ ಸಂಕಿರಣ ಸಹ ನಡೆಯಲಿದೆ.
ಈ ಮೇಳದಲ್ಲಿ ಮಲೆನಾಡಿನ ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದ್ದು, ಹಲಸಿನ ಹಾಗೂ ಹಲಸಿನ ಬೀಜದ ಖಾದ್ಯ ಸ್ಪರ್ಧೆಗೆ ಹೆಸರು ನೊಂದಾಯಿಸಿಕೊಳ್ಳಲು ಜೂ. 27ರ ತನಕ ಅವಕಾಶವಿದೆ. ಹೆಸರು ನೋಂದಾವಣೆಗೆ 660553054 ಸಂಖ್ಯೆಗೆ ಕರೆ ಮಾಡಿದರೂ ಸಾಕು.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page