6

ಗುಜರಿ ವ್ಯಾಪಾರಿ ಅಪಹರಿಸಿದ ಉದ್ದಿಮೆದಾರರು!

ಕಾರವಾರದ ಶಿರವಾಡದಿಂದ ಗುಜುರಿ ವ್ಯಾಪಾರಿಯನ್ನು ಅಪಹರಿಸಿದ್ದ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಒಳಗಾದ ಗುಜುರಿ ವ್ಯಾಪಾರಿಯನ್ನು ರಕ್ಷಿಸಿ ಅವರ ಕುಟುಂಬದವರೊಡನೆ ಕಳುಹಿಸಿಕೊಟ್ಟದ್ದಾರೆ.

ಕಾರವಾರ ಕಾಜುಭಾಗದ ವಕೀಲೆ ನಫಿಸಾ ಮಜೀದ್ ಅವರು ತಮ್ಮ ಪತಿ ಅಬ್ದುಲ್ ಮಜೀದ್‌ರನ್ನು ಅಪಹರಣವಾಗಿರುವ ಬಗ್ಗೆ ಫೆ 22ರಂದು ಪೊಲೀಸ್ ದೂರು ನೀಡಿದ್ದರು. ಬೈಂದೂರಿನಲ್ಲಿ ಗುಜುರಿ ವ್ಯಾಪಾರ ಮಾಡಿಕೊಂಡಿರುವ ಅವರನ್ನು ದುಷ್ಕರ್ಮಿಗಳು ಅಪಹರಿಸಿದ ಬಗ್ಗೆ ಅವರು ವಿವರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ನೆರೆ ಜಿಲ್ಲೆ ಪೊಲೀಸರ ನೆರವು ಯಾಚಿಸಿದರು.

ಮಂಗಳೂರು ಐಜಿಪಿ ಅಮಿತ್ ಸಿಂಗ್, ಕಾರವಾರ ಎಸ್ಪಿ ಎಂ ನಾರಾಯಣ ಜೊತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅಪಹರಣಕಾರರ ಪತ್ತೆಗೆ ವಿಶೇಷ ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ, ಡಿವೈಎಸ್‌ಪಿ ಎಸ್ ವಿ ಗಿರೀಶ್, ಸಿಪಿಐ ಯು ಎಸ್ ಸಾತನಳ್ಳಿ ಹಾಗೂ ಪಿಎಸ್‌ಐ ಮಂಜುನಾಥ ಪಾಟೀಲ್ ಪ್ರಕರಣದ ಕಾರ್ಯಾಚರಣೆಗಿಳಿದರು. ಅಪಹರಣಕ್ಕೆ ಒಳಗಾದ ಅಬ್ದುಲ್ ಮಜೀದ್ ಅವರನ್ನು ಮೂಡಬಿದರೆಯಲ್ಲಿ ಪತ್ತೆ ಹಚ್ಚಿ ಅವರ ಕುಟುಂಬದವರಿಗೆ ಒಪ್ಪಿಸಿದರು.

ಇನ್ನೂ ಅಪಹರಣ ಮಾಡಿದ ಮಂಗಳೂರಿನ ಲಾರಿ ಚಾಲಕ ಯುಸುಫ್, ಮೂಡಬಿದ್ರೆಯ ಗುಜುರಿ ವ್ಯಾಪಾರಿ ಮಹಮದ್ ರಿಯಾಜ್, ಮಂಗಳೂರಿನ ಮರಳು ವ್ಯಾಪಾರಿ ಮಹಮದ್ ರಾವುಪ್, ಕಟ್ಟಡ ಸಾಮಗ್ರಿ ಪೂರೈಕೆದಾರ ಅಬ್ಬುಕರ್ ಸಿದ್ಧಿಕ್ ಹಾಗೂ ಸಿದ್ದರದ ಗಣೇಶ ಕೋಳಂಬಕರ್’ರನ್ನು ಬಂಧಿಸಿದರು. ಇನ್ನೂ ನಾಲ್ವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ಹುಡುಕಾಟ ಮುಂದುವರೆದಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page