6

ಬೈಕ್ ಅಪಘಾತ: ಸಾವಿಗೂ ಮೊದಲೆ ನರಕ ಅನುಭವಿಸಿದ ವಿನಾಯಕ!

ಯಲ್ಲಾಪುರದ ತಾಟವಾಳ ಬಳಿ ಜನವರಿ 2ರ ರಾತ್ರಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವಿನಾಯಕ ವಾಲಿ ಎರಡು ತಿಂಗಳ ನರಳಾಟದ ನಂತರ ಸಾವನಪ್ಪಿದ್ದಾರೆ.

ಬೆಳಗಾವಿಯ ಯಶವಂತ ಪರಸಪ್ಪನವರ್ ಎಂಬಾತರು ಜನವರಿ 2ರ ರಾತ್ರಿ ಹಳಿಯಾಳ ಕ್ರಾಸಿನಿಂದ ಬೆಳಗಾವಿ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ತಾಟವಾಳದ ಪಾಂಡುರoಗ ಹೊಟೇಲ್ ಎದುರು ಬೆಳಗಾವಿಯ ಹರೀಶ ಮೀಸಿ ಎಂಬಾತರು ಓಡಿಸುತ್ತಿದ್ದ ಬೈಕಿಗೆ ಅವರು ಗುದ್ದಿದರು. ಪರಿಣಾಮ ಹರೀಶ್ ಮೀಸಿ ಜೊತೆ ಬೈಕಿನಲ್ಲಿದ್ದ ವಿನಾಯಕ ವಾಲಿ ಗಂಭಿರ ಪ್ರಮಾಣದಲ್ಲಿ ಗಾಯಗೊಂಡರು.

ವಿನಾಯಕ ವಾಲಿ ಹಾಗೂ ಹರೀಶ ಮೀಸಿ ಎಂಬಾತರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಯಲ್ಲಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಪಡೆದ ನಂತರ ವಿನಾಯಕರನ್ನು ಹುಬ್ಬಳ್ಳಿ ಸುಜರಾಯು ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಮರುದಿನ ವಿನಾಯಕ ವಾಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆ ಸೇರಿದ್ದರು.

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನಾಯಕ ವಾಲಿ ಮಾರ್ಚ 3ರ ರಾತ್ರಿ ಸಾವನಪ್ಪಿದರು. ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದ ಯಲ್ಲಾಪುರ ಪೊಲೀಸರು ಇದೀಗ ವಿನಾಯಕ ವಾಲಿ ಸಾವನಪ್ಪಿದ ಬಗ್ಗೆ ಪ್ರಕರಣದಲ್ಲಿ ನಮೂದಿಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page