6

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ: ಈ ಹುದ್ದೆಗೆ ಆಯ್ಕೆಯಾದವರಿಗೆ 48 ಸಾವಿರ ರೂ ಸಂಬಳ!

ಉತ್ತರ ಕನ್ನಡ ಜಿಲ್ಲಾಡಳಿತವೂ ತನ್ನ ಅಧೀನದಲ್ಲಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಲವರ್ಧನೆಗಾಗಿ ಪರಿಣಿತರನ್ನು ಹುಡುಕುತ್ತಿದೆ. ಈ ಹುದ್ದೆಗೆ ಯೋಗ್ಯ ವ್ಯಕ್ತಿ ಸಿಕ್ಕಿದಲ್ಲಿ ಜಿಲ್ಲಾಡಳಿತ ಅವರಿಗೆ ಪ್ರತಿ ತಿಂಗಳು 48400ರೂ ವೇತನ ನೀಡಲು ಸಿದ್ಧವಾಗಿದೆ!

ಅಭ್ಯರ್ಥಿಯೂ ಅತಿಯಾದ ಮಳೆ, ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಚಾಣಾಕ್ಷತೆಹೊಂದಿರಬೇಕು. ಭಾರತೀಯ ವಿಪತ್ತು ಸಂಪನ್ಮೂಲ ಜಾಲದ (ಐಡಿಆರ್) ಬಗ್ಗೆ ಜ್ಞಾನ ಹೊಂದಿರಬೇಕು. ರಾಷ್ಟ್ರೀಯ ಸಂಶೋಧನಾ ನಿರ್ವಹಣಾ ಮಾರ್ಗಸೂಚಿಗಳ ಬಗ್ಗೆ ಅಧ್ಯಯನ ಮಾಡಿರಬೇಕು. ಮಾತನಾಡುವ ಕಲೆಯೊಂದಿಗೆ ಕನ್ನಡ ಹಾಗೂ ಇಂಗ್ಲೀಷ್ ಗೊತ್ತಿರಬೇಕು. ಕಂಪ್ಯುಟರ್ ಜ್ಞಾನವಿರಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದುಕೊಂಡು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರೊಂದಿಗೆ ಕೆಲಸ ಮಾಡಬೇಕು.

ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳನ್ನು ತಡೆಗಟ್ಟುವಿಕೆ ಬಗ್ಗೆ ಚಿಂತಿಸಬೇಕು. ದುರಂತಗಳನ್ನು ತಗ್ಗಿಸುವಿಕೆ, ಸಿದ್ಧತೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಜಿಲ್ಲಾಡಳಿತಕ್ಕೆ ನೆರವಾಗಬೇಕು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕು. ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಇನ್ನಷ್ಟು ಶಕ್ತಿಯುತವಾಗಿಸಬೇಕು. ಇದೆಲ್ಲದರೊಂದಿಗೆ ಅಗತ್ಯವಿದ್ದವರಿಗೆ ತರಬೇತಿ ನೀಡಬೇಕು. ಜನ ಜಾಗೃತಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಇನ್ನೂ ವಿಪತ್ತು ವೃತ್ತಿಪರರು, ಭೂವಿಜ್ಞಾನ, ಪರಿಸರ ವಿಜ್ಞಾನ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರು. ಯುಜಿಸಿ ಮಾನ್ಯತೆಪಡೆದ ಯಾವುದೇ ವಿಶ್ವ ವಿದ್ಯಾಲಯದಿಂದ ವಿಜ್ಞಾನ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಸ್ನಾತಕೋತರ ಪದವಿ ಪಡೆದವರು ಹಾಗೂ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ನಿರ್ದಿಷ್ಟ ಶೈಕ್ಷಣಿಕ ಹಿನ್ನೆಲೆ ಅಥವಾ ಕೆಲಸದ ಅನುಭವವನ್ನು ಹೊಂದಿದ್ದರೆ ಅವರಿಗೆ ಮೊದಲ ಆದ್ಯತೆ. ವಿಪತ್ತು ನಿರ್ವಹಣೆ ವಿಷಯದಲ್ಲಿ ಕನಿಷ್ಠ 3 ವರ್ಷ ಅನುಭವವಿದ್ದರೆ ಇನ್ನೂ ಒಳಿತು.

ಅರ್ಜಿ ಸಲ್ಲಿಸಲು ಕೊನೆ ದಿನ 2025ರ ಮಾರ್ಚ 28. ಅರ್ಜಿ ನಮೂನೆಪಡೆಯುವ ವೆಬ್‌ಸೈಟ್: https://uttarakannada.nic.in/ ಇನ್ನಷ್ಟು ಮಾಹಿತಿಗೆ ಫೋನ್ ಮಾಡಬೇಕಾದ ಸಂಖ್ಯೆ: 08382-226406, 229857

ಉತ್ತರ ಕನ್ನಡ ಜಿಲ್ಲಾಡಳಿತ ನಕಲಿ ದಾಖಲೆಗಳನ್ನು ಒಪ್ಪಲ್ಲ. ಯಾರ ಪ್ರಭಾವಗಳಿಗೂ ಬಗ್ಗಲ್ಲ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page