6

ಅರಬ್ಬಿ ಸಮುದ್ರದ ಅಬ್ಬರ: ಕರಾವಳಿಗೆ ನಡುಕ!

ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಅರಬ್ಬಿ ಸಮುದ್ರದ ಅಬ್ಬರ, ಏಕಾಏಕಿ ಬೀಸುವ ಗಾಳಿಯಿಂದಾಗಿ ಕಡಲ ತೀರದಲ್ಲಿನ ವಾತಾವರಣದಲ್ಲಿ ಏರುಪೇರಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ಕಡಲ ಕೊರೆತ ಮುಂದುವರೆದಿದ್ದು, ಸಮುದ್ರದ ಅಂಚಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರಲ್ಲಿ ನಡುಕ ಶುರುವಾಗಿದೆ. ಜೊತೆಗೆ ಸಮುದ್ರ ಅಂಚಿನಲ್ಲಿ ಹಾದು ಹೋಗಿರುವ ರಸ್ತೆಗಳು ಸಹ ನೀರು ಪಾಲಾಗುತ್ತಿದೆ.
ಕಾರವಾರದ ಮಾಜಾಳಿ, ಕುಮಟಾದ ಗೋಕರ್ಣ, ಅಂಕೋಲಾದ ಕೆಲವು ಕಡೆ ಕಡಲ ಕೊರೆತ ಉಂಟಾಗಿದೆ. ಹೊನ್ನಾವರ – ಭಟ್ಕಳ ಪ್ರದೇಶ ಸಹ ಇದರಿಂದ ಹೊರತಾಗಿಲ್ಲ. ಕಡಲ ಕೊರೆತ ತಡೆಗೆ ಸರ್ಕಾರ ತಡೆಗೋಡೆ ನಿರ್ಮಿಸಲು ಕೋಟ್ಯಂತರ ರೂ ವೆಚ್ಚ ಮಾಡಿದರೂ ಆ ಹಣ ಸಾಲುತ್ತಿಲ್ಲ. ಕಡಲ ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂಬುದು ಕರಾವಳಿಗರ ಬಹುವರ್ಷದ ಬೇಡಿಕೆ. ಅಪಾಯದ ಅಂಚಿನಲ್ಲಿರುವ ಕಾರಣ ಅನೇಕ ಬಾರಿ ಸಮುದ್ರದ ಅಂಚಿನಲ್ಲಿರುವ ಗುಡಿಸಲುಗಳನ್ನು ಜಿಲ್ಲಾಡಳಿತ ತೆರವು ಮಾಡುವ ಪ್ರಯತ್ನವನ್ನು ನಡೆಸಿತ್ತು. ಆದರೆ, ಅನಿವಾರ್ಯವಾಗಿ ಮೀನುಗಾರರು ಅಲ್ಲಿಯೇ ಇದ್ದರು. ಪ್ರಸ್ತುತ ಮೀನುಗಾರಿಕೆ ನಡೆಸಲು ತಡೆ ಇರುವುದರಿಂದ ಕಡಲತಡಿಗಳಲ್ಲಿ ಯಾರೂ ವಾಸಿಸುತ್ತಿಲ್ಲ. ಆದರೂ, ಕಡಲ ಕೊರೆತ ಉಲ್ಬಣಗೊಂಡಲ್ಲಿ ಮೀನುಗಾರರು ನಿರ್ಮಿಸಿದ ಚಿಕ್ಕಪುಟ್ಟ ಗುಡಿಸಲು ಹಾಗೂ ಅದರ ಒಳಗಿರಿಸಿದ ಸಾಮಗ್ರಿಗಳು ಸಮುದ್ರ ಪಾಲಾಗುವ ಸಾಧ್ಯತೆಗಳಿವೆ.

 

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page