6

ಬಿಸಗೋಡು ಕಟ್ಟಡಗಳ ತೆರವಿಗೆ ಆದೇಶ: ಶೈಕ್ಷಣಿಕ-ಧಾರ್ಮಿಕ ಕೇಂದ್ರದ ಮೇಲೆ ಕರಿನೆರಳು

* ಅಚ್ಯುತಕುಮಾರ ಯಲ್ಲಾಪುರ

ಯಲ್ಲಾಪುರ: ಬಿಸಗೋಡಿನ ಮ್ಯಾಂಗನಿಸ್ ಗಣಿ ಕೇಂದ್ರದ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಕರ್ನಾಟಕ ಸ್ಟೇಟ್ ಮಿನರಲ್ಸ ಕಾರ್ಪೋರೇಶನ್ ಸಿದ್ಧತೆ ನಡೆಸಿದ್ದು, ಇದರಿಂದ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕಪ್ಪುಛಾಯೆ ಆವರಿಸಿದೆ.

ಇಲ್ಲಿನ ಕಟ್ಟಡಗಳನ್ನು ತೆರವು ಮಾಡುವಂತೆ ಕರ್ನಾಟಕ ಸ್ಟೇಟ್ ಮಿನರಲ್ಸ ಕಾರ್ಪೋರೇಶನ್’ನವರು ಸೂಪಾ ಗಣಿ ಯೊಜನೆಯವರಿಗೆ ಪತ್ರ ಬರೆದಿದ್ದಾರೆ. ಶೈಕ್ಷಣಿಕ ಉದ್ದೇಶದ ಕಟ್ಟಡಗಳನ್ನು ಬಿಟ್ಟುಕೊಡುವಂತೆ ಶಿಕ್ಷಣ ಇಲಾಖೆಯವರಿಗೆ ಸೂಚಿಸಿದ್ದಾರೆ. ಜೊತೆಗೆ ಧಾರ್ಮಿಕ ಕೇಂದ್ರ ಸೇರಿ ಎಲ್ಲಾ ಕಟ್ಟಡವನ್ನು ಜುಲೈ 15ರ ಒಳಗೆ ಖಾಲಿ ಮಾಡುವಂತೆ ಜೂ 26ರಂದು ಊರಿನವರಿಗೆ ನೋಟಿಸ್ ನೀಡಿದ್ದಾರೆ.

ತೆರವಿಗೆ ಸೂಚಿಸಲಾದ ಬಿಸಗೋಡಿನ ವೀರಾಂಜಿನೇಯ ದೇವಾಲಯ

ಈ ಹಿಂದೆ ಬಿಸಗೋಡಿನಲ್ಲಿ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿತ್ತು. ಪಶ್ಚಿಮಘಟ್ಟ ಉಳಿಸಬೇಕು ಎಂಬ ನಿಟ್ಟಿನಲ್ಲಿ ಪರಿಸರ ಹೋರಾಟಗಳ ಪರಿಣಾಮವಾಗಿ 1996ರಲ್ಲಿ ಗಣಿಕಾರಿಕೆ ಸ್ಥಗಿತಗೊಂಡಿತು. ಆ ವೇಳೆ ಅಲ್ಲಿದ್ದ ಎಲ್ಲಾ ಕಟ್ಟಡಗಳನ್ನು ಶೈಕ್ಷಣಿಕ ಉದ್ದೇಶಗಳಿಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್’ನವರು ಶಿಕ್ಷಣ ಇಲಾಖೆಗೆವಹಿಸಿದ್ದರು. ಅಲ್ಲಿದ್ದ ಕಟ್ಟಡಗಳನ್ನು ನವೀಕರಿಸಿ ಶಿಕ್ಷಕರ ವಸತಿ ನಿಲಯ, ಪ್ರೌಢಶಾಲೆ, ಸಂಸ್ಕೃತ ಪಾಠಶಾಲೆಗಳನ್ನಾಗಿ ಪರಿವರ್ತಿಸಲಾಗಿತ್ತು. ಅಂಚೆ ಕಚೇರಿ ಹಾಗೂ ಕೆ ಎಂ ಎಫ್ ಹಾಲಿನ ಡೈರಿ, ಪಡಿತರ ವಿತರಣಾ ಕೇಂದ್ರ ಹಾಗೂ ಅಂಚೆ ಕಚೇರಿ ಸಹ ಇದೇ ಕಟ್ಟಡದಲ್ಲಿತ್ತು. 90ರ ದಶಕದಲ್ಲಿ ಊರಿನವರ ಬೇಡಿಕೆಯಂತೆ ಅದೇ ಪ್ರದೇಶದಲ್ಲಿ ವೀರಾಂಜಿನೇಯ ದೇವಸ್ಥಾನವನ್ನು ಸಹ ಕರ್ನಾಟಕ ಸ್ಟೇಟ್ ಮಿನರಲ್ಸ ಕಾರ್ಪೋರೇಶನ್’ನವರು ನಿರ್ಮಿಸಿದ್ದರು. ಆದರೆ, ಇಷ್ಟುದಿನಗಳ ಕಾಲ ಮೌನವಾಗಿದ್ದ ಕರ್ನಾಟಕ ಸ್ಟೇಟ್ ಮಿನರಲ್ಸ ಕಾರ್ಪೋರೇಶನ್ ಇದೀಗ ಏಕಾಏಕಿ ಎಲ್ಲಾ ಕಟ್ಟಡಗಳನ್ನು ಖಾಲಿ ಮಾಡುವಂತೆ ಜೂ 26ರಂದು ಗ್ರಾಮಸ್ಥರಿಗೆ ನೋಟಿಸ್ ನೀಡಿದೆ.

ತೆರವಿಗೆ ಸೂಚಿಸಲಾದ ಬಿಸಗೋಡಿನ ಸಂಸ್ಕೃತ ಪಾಠಶಾಲೆ

ಬಿಸಗೋಡು ಹೈಸ್ಕೂಲಿನಲ್ಲಿ ಪ್ರಸ್ತುತ 110 ವಿದ್ಯಾರ್ಥಿಗಳಿದ್ದಾರೆ. ಇತರೆ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಊರಿನವರು ಹಾಸ್ಟೇಲ್ ನಿರ್ಮಿಸುವ ತಯಾರಿಯನ್ನು ನಡೆಸಿದ್ದಾರೆ. ಅಧ್ಯಾಪಕರ ಕೊರತೆಯಿಂದ ಸಂಸ್ಕೃತ ಪಾಠಶಾಲೆ ಈಗ ಇಲ್ಲದಿದ್ದರೂ ಪ್ರತಿ ವರ್ಷ ಅಲ್ಲಿ ವೇದ ಶಿಬಿರಗಳನ್ನು ನಡೆಸಲಾಗುತ್ತದೆ. 65-70ರಷ್ಟು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಊರಿನ ಎಲ್ಲಾ ಸಭೆ-ಸಮಾರಂಭಗಳು ಸಂಸ್ಕೃತ ಪಾಠಶಾಲೆ ಭವನದಲ್ಲಿಯೇ ನಡೆಯುತ್ತದೆ. ವಸತಿ ನಿಲಯದಲ್ಲಿ ಇಬ್ಬರು ಶಿಕ್ಷಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದಾರೆ. ದೇವಾಲಯ ಅರ್ಚಕರು ವಸತಿ ನಿಲಯದಲ್ಲಿ ವಾಸವಾಗಿದ್ದು ಹಾಲಿನ ಡೈರಿ, ಪಡಿತರ ಕೇಂದ್ರ ಹಾಗೂ ಅಂಚೆ ಕಚೇರಿ ಸಹ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಎಲ್ಲಾ ಕಟ್ಟಡ ತೆರವು ನಂತರ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಕರ್ನಾಟಕ ಸ್ಟೇಟ್ ಮಿನರಲ್ಸ ಕಾರ್ಪೋರೇಶನ್’ ಉತ್ಸಾಹ ತೋರಿದ್ದು, ಕಟ್ಟಡ ತೆರವು ಮಾಡಿದಲ್ಲಿ 110 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಉಳಿದ ಎಲ್ಲಾ ಚಟುವಟಿಕೆಗಳ ಮೇಲೆಯೂ ದುಷ್ಪರಿಣಾಮ ಬೀಳಲಿದೆ.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page