6

ಕವಳ ಉಗಿದರೂ ಕಠಿಣ ಕ್ರಮ: ಎಲೆ – ಅಡಿಕೆ ನುಂಗುವ ಹಾಗೂ ಇಲ್ಲ!

ವಾಹನದಲ್ಲಿ ಹೋಗುತ್ತಿರುವವರು `ಕವಳ’ (ಎಲೆ-ಅಡಿಕೆ) ಉಗಿದರೆ ಏನು ಮಾಡಬೇಕು? ಇಂಥಹ ಪ್ರಶ್ನೆ ಇದೀಗ ಸರ್ಕಾರಕ್ಕೂ ಕಾಡುತ್ತಿದೆ!

ಈ ಜಾಗತಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ ಸಾರಿಗೆ ಇಲಾಖೆ ಆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿ ಕೈ ತೊಳೆದುಕೊಂಡಿದೆ. ಶಿರಸಿಯ ವೈದ್ಯ ಡಾ ರವಿಕಿರಣ ಪಟವರ್ದನ್ ಈ `ಸಾಮಾಜಿಕ ಸಮಸ್ಯೆ’ಯನ್ನು ಮೊದಲ ಬಾರಿಗೆ ಎತ್ತಿ ಹಿಡಿದಿದ್ದಾರೆ. ಎರಡು ತಿಂಗಳ ಹಿಂದೆ ಅವರು ಶುದ್ಧವಾದ ಬಟ್ಟೆ ಧರಿಸಿ ಬ್ಯಾಂಕಿಗೆ ಹೋಗುತ್ತಿದ್ದರು. ಆಗ ಬೈಕಿನಲ್ಲಿ ಹೋಗುತ್ತಿದ್ದವನೊಬ್ಬ ಅವರ ಮೇಲೆ `ಕವಳ’ ಉಗಿದಿದ್ದ. ಇದರಿಂದ ಇಡೀ ಮೈ ಕೆಂಪಾಗಿತ್ತು. ಆತನಿಗೂ ಹಿಂತಿರುಗಿ ಉಗಿಯುವ ಎಂದರೆ ವೈದ್ಯರ ಬಾಯಲ್ಲಿ ಕವಳವೇ ಇರಲಿಲ್ಲ!

ಒಮ್ಮೆ ಡಾ ರವಿಕಿರಣ ಪಟವರ್ಧನ್ ಅವರು ದೇವಾಲಯದ ಸಾಲಿನಲ್ಲಿದ್ದಾಗ ನೆಲಪೂರ್ತಿ ಕವಳದಿಂದ ಕೆಂಪಾಗಿದ್ದನ್ನು ಗಮನಿಸಿದ್ದರು. `ಜ್ವರ ಬಂದ ಸೀನಿದಾಗ ಎದುರುಗಿರುವ ವ್ಯಕ್ತಿಗೂ ಶೀತ-ನೆಗಡಿ ಹರಡುವ ಹಾಗೇ ಈ ಕವಳ ತೂಪುವುದರಿಂದ ಸಹ ರೋಗ ಹರಡುವುದು ಸತ್ಯ’ ಎಂದು ಸ್ವತಃ ವೈದ್ಯರಾಗಿರುವ ಡಾ ಪಟವರ್ದನ್ ವಿವರಿಸುತ್ತಾರೆ. `ಬೇರೆಯವರ ಬಾಯಿಂದ ಬಿದ್ದ ಕವಳದಿಂದ ಹಲವು ರೋಗ ಹರಡುವ ಸಾಧ್ಯತೆಯಿದ್ದು, ಜನ ಜಾಗೃತಿ ಮಾತ್ರ ಇದಕ್ಕೆ ಪರಿಹಾರ’ ಎಂಬುದು ಅವರ ಅಭಿಪ್ರಾಯ.

ವೃತ್ತಿಯಲ್ಲಿ ವೈದ್ಯರಾಗಿರುವ ಅವರು ಈ ಸಾಮಾಜಿಕ ರೋಗಕ್ಕೆ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪತ್ರ ಚಳುವಳಿ ಮೂಲಕ ಆಂದೋಲನ ನಡೆಸಿದ್ದಾರೆ. `ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ಅಡಿ ಬದಲಾವಣೆ ತಂದು ಈ ರೀತಿ ವರ್ತಿಸುವವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕು. ಎಲ್ಲೆಂದರಲ್ಲಿ ಉಗುಳುವ ಮಾನಸಿಕತೆ ದೂರವಾಗಬೇಕು’ ಎಂಬುದು ಸಭ್ಯ ಕವಳ ಪ್ರಿಯರ ಮಾತಾಗಿದೆ.

 

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page