6

Shiruru: ದುರಂತದ ಊರಿನಲ್ಲಿ ಧರ್ಮಾಧಿಕಾರಿ ಸಂಚಾರ: ಅವಘಡ ನಡೆಯದಂತೆ ಮಂಜುನಾಥನಿಗೆ ಪ್ರಾರ್ಥನೆ

ಅಂಕೋಲಾ ತಾಲೂಕಿನ ಶಿರೂರು (shiruru) ಗುಡ್ಡ ಕುಸಿತದಿಂದ ಊರಿಗೇ ಊರೇ ನಾಶವಾದ ಉಳುವರೆಗೆ ಮಂಗಳವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಿದ್ದು, ಅಲ್ಲಿನ ಪರಿಸ್ಥಿತಿಗಳನ್ನು ನೋಡಿ ಮರುಕ ವ್ಯಕ್ತಪಡಿಸಿದರು. `ಈ ಬಗೆಯ ದುರಂತಗಳಿoದ ಜನರನ್ನು ಕಾಪಾಡು’ ಎಂದು ತಮ್ಮ ಆರಾಧ್ಯ ದೇವ ಮಂಜುನಾಥ ಸ್ವಾಮಿಯನ್ನು ಅವರು ಬೇಡಿಕೊಂಡರು.

`ಶಿರೂರು ಗುಡ್ಡ ಕುಸಿತ ದುರಂತ ಅಮಾನವೀಯ ಘಟನೆಯಾಗಿದೆ. ಇಂಥ ಘಟನೆ ಮರುಕಳಿಸದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದವರು ಹೇಳಿದರು. `ಗುಡ್ಡ ಕುಸಿತದಿಂದ ನೊಂದವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನೇರವಾಗಲಿದೆ. ಮನೆ ಕಳೆದುಕೊಂಡವರಿಗೆ ಆರ್ಥಿಕ ಸಹಾಯ ಮಾಡಲಿದೆ’ ಎಂದರು.

`ಪ್ರವಾಸಿಗರು ಮಳೆಗಾಲದಲ್ಲಿ ಆದಷ್ಟು ಪ್ರಯಾಣವನ್ನು ಕಡಿಮೆಮಾಡಬೇಕು’ ಎಂದು ಕರೆ ನೀಡಿದರು. ದುರಂತದ ಬಗ್ಗೆ ರಾಜ್ಯಸಭೆಯ ಗಮನಸೆಳೆಯುವುದಾಗಿ ತಿಳಿಸಿದರು. ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಉಳುವರೆ ಭಾಗದ ಜನರ ಸಮಸ್ಯೆಗಳ ಬಗ್ಗೆ ವಿವರಿಸಿದರು. ದುರಂತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕರ ಮಕ್ಕಳಿಗೆ ವೀರೇಂದ್ರ ಹೆಗ್ಗಡೆ ಸಾಂತ್ವಾನ ಹೇಳಿದರು.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page