6

ಯಲ್ಲಾಪುರದಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ

ಯಲ್ಲಾಪುರ: ಹುಬ್ಬಳ್ಳಿ ಕಡೆಯಿಂದ ಹೊರಟ ಲಾರಿಯೊಂದು ಗುರುವಾರ ರಾತ್ರಿ ಕಂಟೇನರ್ ಹಾಗೂ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿಗೆ ಗುದ್ದಿದೆ. ಇಲ್ಲಿನ ನ್ಯೂ ಮಲಬಾರ್ ಹೋಟೆಲ್ ಎದುರು ಈ ಅಪಘಾತ ನಡೆದಿದೆ.

ಹುಬ್ಬಳ್ಳಿ ಕಡೆಯಿಂದ ಅತಿ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಚಾಲಕ ಮೊದಲು ಕಂಟೇನರ್’ಗೆ ಗುದ್ದಿದ್ದು ನಂತರ ರೇಶ್ಮಾ ಟ್ರಾವೆಲ್ಸ’ಗೆ ಸೇರಿದ ಬಸ್’ಗೆ ಗುದ್ದಿದ್ದಾನೆ. ಲಾರಿ ಹಾಗೂ ಕಂಟೇನರ್ ಜಖಂ ಆಗಿದೆ. ಈ ಅಪಘಾತದಲ್ಲಿ ಲಾರಿ ಚಾಲಕನ ಕಾಲು ಮುರಿದಿದೆ. ರೇಶ್ಮಾ ಟ್ರಾವಲ್ಸ’ನಲ್ಲಿ ಸಂಚರಿಸುತ್ತಿದ್ದ ಹಲವು ಪ್ರಯಾಣಿಕರಿಗೆ ಅಲ್ಲಲ್ಲಿ ಪೆಟ್ಟಾಗಿದೆ. ರೇಶ್ಮಾ ಟ್ರಾವೆಲ್ಸ ಮಂಗಳೂರಿನಿoದ ಹುಬ್ಬಳ್ಳಿ ಮಾರ್ಗವಾಗಿ ಮುಂಬೈ’ಗೆ ತೆರಳುತ್ತಿತ್ತು.

ಗಾಯಗೊಂಡವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಗಾಯಗೊಂಡವರನ್ನು ಹುಬ್ಬಳ್ಳಿಗೆ ಕರೆದೊಯ್ಯುವ ಪ್ರಯತ್ನ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    One thought on “ಯಲ್ಲಾಪುರದಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ”

    Comments are closed.

    You cannot copy content of this page