6

ಉತ್ತರ ಕನ್ನಡದಲ್ಲಿ ಸಿರಿಗನ್ನಡ ಯಾತ್ರೆ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯ ಉದ್ಘಾಟಣೆಯು ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿ ದೇವಾಲಾಯದಲ್ಲಿ ನಡೆಯಲಿದೆ.

ಕನ್ನಡ ಜ್ಯೋತಿ ರಥಯಾತ್ರೆಯು ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಲಿದ್ದು, ಸೆ,22 ರಿಂದ ಸೆ.25 ರವರೆಗೆ ಉತ್ತರ ಕನ್ನಡ
ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್
ಸಹಕಾರದಲ್ಲಿ ಸಂಚರಿಸಲಿದೆ. ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಆಗಮಿಸಲಿದ್ದು, ತಾಲೂಕಿನಲ್ಲಿ ಸಂಚರಿಸಲಿದೆ, ನಂತರ ಮಧ್ಯಾಹ್ನ 2 ಗಂಟೆಗೆ ಹೊನ್ನಾವರ ತಾಲೂಕಿನಲ್ಲಿ ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ. ಸೆಂಜೆ 4.30 ಗಂಟೆಗೆ ಕುಮಟಾ ತಾಲೂಕಿಗೆ ಆಗಮಿಸಿ ತಾಲೂಕಿನಲ್ಲಿ ಸಂಚರಿಸಲಿದೆ.

ಸೆ.23 ರಂದು ಬೆಳಗ್ಗೆ 10 ಗಂಟೆಗೆ ಅಂಕೋಲಾ ತಾಲೂಕಿಗೆ ಆಗಮಿಸಿ ರಥ ಸಂಚರಸಲಿದೆ. ನಂತರ ಮಧ್ಯಾಹ್ನ 12.30 ಗಂಟೆಗೆ
ಜಿಲ್ಲಾ ಕೇಂದ್ರವಾದ ಕಾರವಾರ ನಗರಕ್ಕೆ ಆಗಮಿಸಲಿದ್ದು, ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಗೋವಾದ ಕಾಣಕೋಣಗೆ ಆಗಮಿಸುವ ಕನ್ನಡ ರಥಯಾತ್ರೆಗೆ ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ. ನಂತರ ಕಾಣಕೋಣದಿಂದ ಸಂಜೆ 6.30 ಗಂಟೆಗೆ ಜೋಯಿಡಾ ತಾಲೂಕಿಗೆ ಆಗಮಿಸುವ ರಥಕ್ಕೆ ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ.

ಸೆ.24 ರಂದು ಬೆಳಗ್ಗೆ 10 ಗಂಟೆಗೆ ದಾಂಡೇಲಿಗೆ ಆಗಮಿಸುವ ಕನ್ನಡ ರಥಯಾತ್ರೆ ದಾಂಡೇಲಿಯಲ್ಲಿ ಸಂಚರಿಸಿ, ಮಧ್ಯಾಹ್ನ 2
ಗಂಟೆಗೆ ಹಳಿಯಾಳ ತಾಲೂಕಿಗೆ ಆಗಮಿಸಿಲಿದ್ದು ತಾಲೂಕಿನಲ್ಲಿ ಸ್ವಾಗತ ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ.
ಸೆ.25 ರಂದು ಬೆಳಗ್ಗೆ 10 ಗಂಟೆಗೆ ಯಲ್ಲಾಪುರ ತಾಲೂಕಿಗೆ ಆಗಮಿಸುವ ಕನ್ನಡ ರಥಯಾತ್ರೆ ತಾಲೂಕಿನಲ್ಲಿ ಸಂಚರಿಸಿ
ಮಧ್ಯಾಹ್ನ 12 ಗಂಟೆಗೆ ಶಿರಸಿ ತಾಲೂಕಿಗೆ ಆಗಮಿಸುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಸ್ವಾಗತ, ಹಾರ ಸಮರ್ಪಣೆ ರಥ ಸಂಚಾರದ ನಂತರ ಬೀಳ್ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ, ಲಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಪ್ರವಾಸ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಸೆ.21ರಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಸಿದ್ದಾಪುರದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ 87 ನೇ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥದ ಚಾಲನೆ ಪೂರ್ವ ಸಿದ್ದತೆಗಾಗಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವರು.

ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿ ದೇವಲಾಯದಲ್ಲಿ ಉತ್ತರ
ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಸಂಸದರು, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳೊಗೂಡಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page