6

ಅರಣ್ಯ ಹೋರಾಟಗಾರರಿಗೆ ಗ್ರೀನ್ ಕಾರ್ಡ: ರಾಜಧಾನಿ ಪಯಣಕ್ಕೆ ಈಗಲೇ ಟಿಕೆಟ್ ಕಾಯ್ದಿರಿಸಿ!

ಶಿರಸಿ: ಅರಣ್ಯ ಹೋರಾಟದಲ್ಲಿ ಮುಂಜೂಣಿಯಲ್ಲಿರುವ ನಾಯಕರಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ `ಗ್ರೀನ್ ಕಾರ್ಡ’ ವಿತರಿಸಿದೆ. ಇದರೊಂದಿಗೆ ಮುಂದಿನ ಹೋರಾಟಕ್ಕಾಗಿ ನ 7ರಂದು ಅರಣ್ಯವಾಸಿಗಳೊಂದಿಗೆ ಬೆಂಗಳೂರಿಗೆ ಆಗಮಿಸುವಂತೆ ಆಹ್ವಾನ ನೀಡಿದೆ.

ಹೀಗಾಗಿ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಅರಣ್ಯವಾಸಿಗಳು ನ 7ರಂದು ಗುರುವಾರ ರಾಜಧಾನಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದಿರುವ ಅರಣ್ಯ ಅತಿಕ್ರಮಣದಾರರು ನಿಮ್ಮ ಟಿಕೆಟ್ ಈಗಲೇ ಕಾಯ್ದಿರಿಸುವುದು ಒಳಿತು.

`ರಾಜ್ಯ ಸರ್ಕಾರವು ಈಗಾಗಲೇ ಕರಡು ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಂತಿಮ ವರದಿ ಅನುಷ್ಠಾನ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಿದ್ದು, ರಾಜ್ಯಾದಂತ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಹಿನ್ನಲೆ ಬೆಂಗಳೂರು ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಂಘಟನೆ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕು ನೀಡುವ ಬಗ್ಗೆಯೂ ಒತ್ತಾಯಿಸಲಾಗುತ್ತದೆ.

ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪೂರ್ವಭಾವಿಯಾಗಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ ಸಭೆ ನಡೆಸಿದರು. ಜಿಲ್ಲಾ ಸಂಚಾಲಕರಾದ ನೆಹರು ನಾಯ್ಕ ಬಿಳೂರು, ನಾಗರಾಜ ಎಸ್ ದೇವಸ್ಥಳ ಅಚನಳ್ಳಿ, ರಾಜು ನರೇಬೈಲ್, ಇಬ್ರಾಹೀಂ ಗೌಡಳ್ಳಿ, ಎಮ್.ಆರ್. ನಾಯ್ಕ ಕಂಡ್ರಾಜಿ, ಶಿವನಂದಾ ಪೂಜಾರಿ ಜಡ್ಡಿಗದ್ದೆ, ಗಂಗೂ ಬಾಯಿ ರಜಪೂತ, ಕಮಲಾ ಬಾಯಿ ಸಂಗೂ, ಸಾವಿತ್ರಿ ಎಳಿಗೇರ್, ನಜೀರ ಶೇಖ, ಸಪ್ರೀಂ ಶೇಖ, ರಾಜು ಗೌಡ ಅಲಕೋಡ ಮೊದಲಾದವರು ಸಭೆಯಲ್ಲಿ ಹಾಜರಿದ್ದು ಗ್ರೀನ್ ಕಾರ್ಡ ಸ್ವೀಕರಿಸಿದರು. ಕಿರಣ ಮರಾಠಿ ದೇವನಳ್ಳಿ ಸ್ವಾಗತಿಸಿ, ವಂದಿಸಿದರು.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page